ಅಮಿತ್ ಶಾ ಅವರ ‘ಗೆದ್ದಲುಗಳು' ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ರಾಮ್ ಮಾಧವ್

Update: 2020-06-04 13:39 GMT

ಹೊಸದಿಲ್ಲಿ : ಅಕ್ರಮ ವಲಸಿಗರು `ಗೆದ್ದಲಿನಂತೆ'' ಎಂದು 2018ರಲ್ಲಿ ಅಸ್ಸಾಂ ಎನ್‍ಆರ್‍ಸಿಗೆ ಪೂರ್ವಭಾವಿಯಾಗಿ ಈಗಿನ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೀಡಾಗಿತ್ತು. ಆದರೆ ಅವರ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿತ್ತು ಎಂದು ಬಿಬಿಸಿ ಹಾರ್ಡ್ ಟಾಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.

“ನಿಮ್ಮ ಪಕ್ಷದಲ್ಲಿ ಜನಾಂಗೀಯತೆ, ತಾರತಮ್ಯ ಅಥವಾ ಮತೀಯ ದ್ವೇಷವಿಲ್ಲವೆಂದು ನಿಮಗೆ ಖಾತ್ರಿಯಿದ್ದಲ್ಲಿ ನಿಮ್ಮದೇ ಗೃಹ ಸಚಿವರಾದ ಅಮಿತ್ ಶಾ ಮುಸ್ಲಿಂ ಬಾಹುಳ್ಯ ಬಾಂಗ್ಲಾದೇಶದಿಂದ ಆಗಮಿಸಿ ಭಾರತದಲ್ಲಿರುವ ವಲಸಿಗರನ್ನು ಬಂಗಾಳ ಕೊಲ್ಲಿಗೆ ಎಸೆಯಬೇಕಾಗಿರುವ `ಗೆದ್ದಲುಗಳು' ಎಂದು ಬಣ್ಣಿಸಿರುವ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು?” ಎಂದು ಅವರಲ್ಲಿ ಸಂದರ್ಶನಕಾರ ಸ್ಟೀಫನ್ ಸಕೂರ್ ಪ್ರಶ್ನಿಸಿದಾಗ ರಾಮ್ ಮಾಧವ್ ಮೇಲಿನಂತೆ ಹೇಳಿದ್ದಾರೆ.

“ಶಾ ಅವರ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಲ್ಲಾ ದೇಶಗಳೂ ಅಕ್ರಮ ವಲಸಿಗರನ್ನು ಹೊರಗಿಡಬೇಕು, ಅಕ್ರಮ ವಲಸಿಗರು ಯಾವುದೇ  ಒಂದು ಧರ್ಮದವರು ಹೇಗಾಗಬಹುದೆಂದು ನನಗೆ ವಿವರಿಸಿ. ಭಾರತದಲ್ಲಿ ಅಕ್ರಮ ವಲಸಿಗರಿಗೆ ಸ್ವಾಗತವಿಲ್ಲ, ಇದಕ್ಕಾಗಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಕೆಲವೊಂದು ಬಾರಿ ಕೆಲ ಹೇಳಿಕೆಗಳಿಗೆ ಬೇರೆಯೇ ಅರ್ಥ ಕಲ್ಪಿಸಲಾಗುತ್ತದೆ” ಎಂದರು.

“ಬೇರೆ ಯಾವುದೇ ದೇಶದಂತೆ ನರೇಂದ್ರ ಮೋದಿ ಸರಕಾರಕ್ಕೆ ಅಕ್ರಮ ವಲಸಿಗರು ದೇಶ ಪ್ರವೇಶಿಸುವುದು ಬೇಕಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಅನುಕಂಪವಿದೆ. ಆದರೆ ದೇಶಗಳು ತಮ್ಮ ಜನರು ಹಾಗೂ ಅವರ ಜೀವನೋಪಾಯಗಳನ್ನು ಅಕ್ರಮ ವಲಸಿಗರಿಂದ ರಕ್ಷಿಸಬೇಕಿದೆ” ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News