ಆರನೇ ಸಾಮೂಹಿಕ ವಿನಾಶ ಸಾಧ್ಯತೆ: 515 ಪ್ರಬೇಧಗಳಿಗೆ ಕುತ್ತು

Update: 2020-06-05 03:54 GMT

ಹೊಸದಿಲ್ಲಿ, ಜೂ.5: ವಿಶ್ವದಲ್ಲಿ ಆರನೇ ಸಾಮೂಹಿಕ ವಿನಾಶದ ಅಪಾಯ ಸಾಧ್ಯತೆ ಹೆಚ್ಚುತ್ತಿದ್ದು, ಇದರಿಂದ 515 ಜೀವ ಪ್ರಬೇಧಗಳ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದು ಇತ್ತೀಚಿಗೆ ನಡೆಸಿದ ಅಂಕಿಅಂಶಗಳ ವಿಶ್ಲೇಷಣೆಯಿಂದ ದೃಢಪಟ್ಟಿದೆ.

ನ್ಯಾಷನಲ್ ಅಕಾಡಮಿ ಆಫ್ ಸೈನ್ಸಸ್ ಜೂನ್ 1ರಂದು ಬಿಡುಗಡೆ ಮಾಡಿರುವ ಅಂಕಿಅಂಶಗಳನ್ನು ವಿಜ್ಞಾನಿಗಳು ವಿಶ್ಲೇಷಿಸಿದ್ದು, ಹಾಲಿ ಲಭ್ಯವಿರುವ 29,400 ಜೀವ ಪ್ರಬೇಧಗಳ ಪೈಕಿ ಭಾರತವೂ ಸೇರಿದಂತೆ ವಿವಿಧೆಡೆ 1.7% ಅಂದರೆ ಒಂದು ಸಾವಿರಕ್ಕಿಂತ ಕಡಿಮೆ ಸಂಖ್ಯೆಯಲ್ಲಿರುವ 515 ಸಸ್ತನಿ, ಪಕ್ಷಿ, ಉಭಯವಾಸಿಗಳು, ಸರೀಸೃಪ ಪ್ರಬೇಧಗಳು ವಿನಾಶದ ಅಂಚಿನಲ್ಲಿವೆ.

ವಿನಾಶದ ಅಂಚಿನಲ್ಲಿರುವ ಪ್ರಬೇಧಗಳಲ್ಲಿ 243 (47%) ವಿವಿಧ ಖಂಡಗಳಲ್ಲಿ ವಾಸವಿದ್ದರೆ, 272 (53%) ದ್ವೀಪವಾಸಿಗಳು. ವಿನಾಶದ ಅಂಚಿನಲ್ಲಿರುವ ಬಹುತೇಕ ಪ್ರಬೇಧಗಳು ದಕ್ಷಿಣ ಅಮೆರಿಕ, ಓಶಿಯಾನಾ, ಏಷ್ಯಾ, ಆಫ್ರಿಕಾ, ಉತ್ತರ ಮತ್ತು ಕೇಂದ್ರ ಅಮೆರಿಕ ಪ್ರದೇಶದಲ್ಲಿವೆ.

ಯೂರೋಪ್ ಖಂಡದಲ್ಲಿ ಈ ಪ್ರಮಾಣ ಶೇಕಡ 1ರಷ್ಟು ಇದೆ. ಗರಿಷ್ಠ ಸಂಖ್ಯೆಯ ಸಸ್ತನಿ ಪ್ರಬೇಧಗಳಿಗೆ ಅಪಾಯ ಇರುವುದು ಏಷ್ಯಾ ಮತ್ತು ಓಶಾನಿಯಾ ಪ್ರದೇಶದಲ್ಲಿ. ಅಂತೆಯೇ ಪಕ್ಷಿ ಸಂಕುಲಕ್ಕೆ ಗರಿಷ್ಠ ಅಪಾಯ ಇರುವುದು ಅಮೆರಿಕ ಮತ್ತು ಓಶಿಯಾನಾದಲ್ಲಿ. ಜೀವವೈವಿಧ್ಯ ಹಾಟ್‌ಸ್ಪಾಟ್‌ಗಳೆನಿಸಿದ ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳಲ್ಲಿ ಕೂಡಾ ಹಲವು ಪ್ರಬೇಧಗಳು ನಾಶವಾಗಲಿವೆ ಎಂದು ಅಂದಾಜಿಸಲಾಗಿದೆ.

ಹಾಟ್‌ಸ್ಪಾಟ್‌ಗಳನ್ನು ಸುರಕ್ಷಿತವಾಗಿ ಇರಿಸುವ ಮೂಲಕ ವಿನಾಶದ ಅಂಚಿನಲ್ಲಿರುವ ಪ್ರಬೇಧಗಳನ್ನು ಉಳಿಸುವಲ್ಲಿ ಭಾರತ ಕೊಡುಗೆ ನೀಡಬಹುದಾಗಿದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಭಾರತೀಯ ತಜ್ಞರು ಹೇಳಿದ್ದಾರೆ.

ಜೀವವೈವಿಧ್ಯ ಮಾನವಕುಲ ಮತ್ತು ಪರಿಸರದ ಸಮತೋಲನಕ್ಕೆ ಪ್ರಮುಖವಾದದ್ದು ಎನ್ನುವುದನ್ನು ಅಧ್ಯಯನ ವರದಿ ಎತ್ತಿ ತೋರಿಸಿದೆ. ಆದರೆ ಭಾರತದ ಪರಿಸರಾತ್ಮಕ ನಿರ್ಧಾರಗಳು ವಿಜ್ಞಾನಿಗಳ ಶಿಫಾರsiಗೆ ವಿರುದ್ಧವಾಗಿರುವುದನ್ನು ನಾವು ಕಾಣಬಹುದು ಎಂದು ಪರಿಸರವಾದಿ ನಂದಿನಿ ವೆಲ್ಹೊ ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News