ನಿಯಮ ಉಲ್ಲಂಘನೆಗಾಗಿ ಥಾಣೆಯ ಎರಡು ಆಸ್ಪತ್ರೆಗಳಿಗೆ 16 ಲ.ರೂ.ದಂಡ

Update: 2020-06-07 14:37 GMT

ಥಾಣೆ (ಮಹಾರಾಷ್ಟ್ರ),ಜೂ.7: ಥಾಣೆ ಜಿಲ್ಲೆಯಲ್ಲಿನ ಎರಡು ನಿಯೋಜಿತ ಕೋವಿಡ್-19 ಆಸ್ಪತ್ರೆಗಳು ರಾಜ್ಯ ಸರಕಾರದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರತಿ ರೋಗಿಗೆ ಒಂದು ಲ.ರೂ.ನಂತೆ ಒಟ್ಟು 16 ಲ.ರೂ.ದಂಡವನ್ನು ವಿಧಿಸಲಾಗಿದೆ ಎಂದು ಥಾಣೆ ಮಹಾನಗರ ಪಾಲಿಕೆಯ ಉಪ ಆಯುಕ್ತ ವಿಶ್ವನಾಥ ಕೇಳ್ಕರ್ ಅವರು ರವಿವಾರ ಇಲ್ಲಿ ತಿಳಿಸಿದರು.

  ಮಹಾರಾಷ್ಟ್ರ ಕೋವಿಡ್-19 ನಿಯಮಗಳು ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ದಂಡ ವಿಧಿಸುವ ಮುನ್ನ ಈ ಎರಡು ಆಸ್ಪತ್ರೆಗಳಿಗೆ ಹಲವಾರು ಬಾರಿ ಎಚ್ಚರಿಕೆಗಳನ್ನು ನೀಡಲಾಗಿತ್ತು. ಈ ಆಸ್ಪತ್ರೆಗಳನ್ನು ಗಂಭೀರ ಸ್ಥಿತಿಯಲ್ಲಿರುವ ಕೋವಿಡ್-19 ರೋಗಿಗಳಿಗಾಗಿ ಮೀಸಲಿರಿಸಲಾಗಿದ್ದು, ಲಕ್ಷಣರಹಿತರು ಅಥವಾ ಸೌಮ್ಯಲಕ್ಷಣಗಳನ್ನು ಹೊಂದಿದವರಿಗಾಗಿ ಅಲ್ಲ. ಈ ಆಸ್ಪತ್ರೆಗಳು ನಿಗದಿತ ಅವಧಿಗಿಂತ ಹೆಚ್ಚು ಸಮಯ ರೋಗಿಗಳನ್ನೂ ಇಟ್ಟುಕೊಂಡಿದ್ದವು ಎಂದರು.

ಈ ಪೈಕಿ ಒಂದು ಆಸ್ಪತ್ರೆಗೆ 13 ಲ.ರೂ.ಮತ್ತು ಇನ್ನೊಂದು ಆಸ್ಪತ್ರೆಗೆ ಮೂರು ಲ.ರೂ.ದಂಡ ವಿಧಿಸಲಾಗಿದೆ ಎಂದು ಕೇಳ್ಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News