ಪ್ರತಿಭಟನಕಾರರ ಮಧ್ಯೆ ವಾಹನ ಓಡಿಸಿ, ಗುಂಡು ಹಾರಾಟ: ಶಂಕಿತ ಪೊಲೀಸ್ ವಶಕ್ಕೆ
Update: 2020-06-08 21:18 IST
ಸ್ಯಾನ್‌ಫ್ರಾನ್ಸಿಸ್ಕೊ,ಜೂ.8: ಜಾರ್ಜ್ ಫ್ಲಾಯ್ಡ್ ನ ಸಾವನ್ನು ಪ್ರತಿಭಟಿಸಿ ವಾಯವ್ಯ ಅಮೆರಿಕದ ನಗರ ಸಿಯಾಟಲ್‌ನಲ್ಲಿ ರವಿವಾರ ರ್ಯಾಲಿಯಲ್ಲಿ ಬಂದೂಕುಧಾರಿಯೊಬ್ಬ ಪ್ರತಿಭಟನಕಾರರ ಮಧ್ಯೆ ವಾಹನವನ್ನು ಓಡಿಸಿ, ಗುಂಡು ಹಾಜನರು ಭಯಭೀತರಾಗಿ ಕಿರುಚುತ್ತಾ ದಿಕ್ಕುಪಾಲಾಗಿ ಓಡಿಹೋಗುತ್ತಿರುವ ದೃಶ್ಯಗಳನ್ನು ಸ್ಥಳೀಯ ಟಿವಿ ವಾಹಿನಿ ಕ್ಯೂ13ಫಾಕ್ಸ್ ಪ್ರಸಾರ ಮಾಡಿದೆ.
ಗುಂಡುಹಾರಾಟ ಬಳಿಕ ಆತ ಜನಜಂಗುಳಿಯ ಮಧ್ಯೆ ಕಣ್ಮರೆಯಾಗಿ ಹೋದನೆಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ ಘಟನೆಗೆ ಸಂಬಂಧಿಸಿ ಓರ್ವ ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಆತನಿಂದ ಶಸ್ತ್ರಾಸ್ತ್ರವೊಂದನ್ನು ವಶಪಡಿಸಿಕೊಳ್ಳಲಾಗಿದೆ.
ಗುಂಡೇಟಿನಿಂದ ಗಾಯಗಳಾದ 20ರ ಹರೆಯದ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಪರಿಸ್ಥಿತಿ ಸ್ಥಿರವಾಗಿದೆಯೆಂದು ತಿಳಿದುಬಂದಿದೆ.