370ನೇ ವಿಧಿ ರದ್ದತಿಯಿಂದ ಪಾಕಿಸ್ತಾನಕ್ಕೆ ಮಾತ್ರ ಅಸಮಾಧಾನ: ಲೆ.ಜ. ರಾಜು

Update: 2020-06-08 16:13 GMT

ಶ್ರೀನಗರ, ಜೂ.8: ಕಾಶ್ಮೀರದಲ್ಲಿ ದೀರ್ಘಕಾಲದಿಂದ ಶಾಂತಿ ನೆಲೆಸಿರುವ ಕಾರಣ ಜನತೆ 370ನೇ ವಿಧಿ ರದ್ಧತಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿದ್ದಾರೆ. ಆದರೆ ಪಾಕಿಸ್ತಾನಕ್ಕೆ ಮಾತ್ರ ಬೇಸರವಾಗಿದ್ದು ಅದು ಕಾಶ್ಮೀರ ಕಣಿವೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂಬ ಸುಳ್ಳು ಹೇಳಿಕೆಯನ್ನು ಮುಂದುವರಿಸಿದೆ ಎಂದು ಸೇನೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

370ನೇ ವಿಧಿ ರದ್ದುಗೊಳಿಸಿದ ಬಳಿಕ ಕಣಿವೆಯಲ್ಲಿ ಶಾಂತಿ ನೆಲೆಸಿರುವುದನ್ನು ಕಾಣಬಹುದು. ಫೆಬ್ರವರಿಯಿಂದ ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಬಹುತೇಕ ಸಹಜತೆಗೆ ಮರಳಿದೆ. ಆದರೆ ಇದು ಪಾಕಿಸ್ತಾನದ ಅಸಮಾಧಾನಕ್ಕೆ ಕಾರಣವಾಗಿದೆ. ಜಮ್ಮು ಕಾಶ್ಮೀರದಲ್ಲಿ ಸದಾಕಾಲ ಅಶಾಂತವಾಗಿಯೇ ಇರಬೇಕೆಂಬುದು ಪಾಕಿಸ್ತಾನದ ಬಯಕೆಯಾಗಿತ್ತು ಮತ್ತು ಈ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿತ್ತು. ಆದರೆ ಈಗ ಪಾಕಿಸ್ತಾನದ ಸೇನೆಯ ಕುತಂತ್ರ ಜಮ್ಮು ಕಾಶ್ಮೀರದಲ್ಲಿ ಫಲಿಸುತ್ತಿಲ್ಲ ಎಂದು ಸೇನೆಯ ದಕ್ಷಿಣ ಕಾಶ್ಮೀರದಲ್ಲಿ ಭಾರತದ ಸೇನಾನೆಲೆ ವಿಕ್ಟರ್ ಫೋರ್ಸ್‌ನ ಮೇಜರ್ ಜನರಲ್ ಎ. ಸೇನ್‌ಗುಪ್ತಾ ಮತ್ತು ಸಿಆರ್‌ಪಿಎಫ್‌ನ ಇನ್‌ಸ್ಪೆಕ್ಟರ್ ಜನರಲ್ ಮೇ ಜ ರಾಜು ಹೇಳಿದ್ದಾರೆ.

ಶೋಪಿಯಾನ್ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಕಾರ್ಯಾಚರಣೆಯಲ್ಲಿ 24 ಗಂಟೆಯೊಳಗೆ 9 ಉಗ್ರರು ಬಲಿಯಾದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಎರಡು ರೀತಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಹಿಂಸಾಚಾರಕ್ಕೆ ಪಾಕಿಸ್ತಾನ ಕೊಡುಗೆ ನೀಡುತ್ತಿತ್ತು. ಮೊದಲನೆಯದು ಭೌತಿಕ ಕ್ಷೇತ್ರ. ಗಡಿನಿಯಂತ್ರಣ ರೇಖೆಯುದ್ದಕ್ಕೂ ಶಸ್ತ್ರಾಸ್ತಗಳನ್ನು ಜಮೆಗೊಳಿಸುವುದು. ಎರಡನೆಯದು ಮಾಹಿತಿ ಕ್ಷೇತ್ರ, ಅಂದರೆ ಸುಳ್ಳು ಸುದ್ಧಿ ಹಬ್ಬಿಸಿ ಜನತೆಯಲ್ಲಿ ಗೊಂದಲ, ಆತಂಕ ಮೂಡಿಸಲು ಪ್ರಯತ್ನಿಸುವುದು ಪಾಕಿಸ್ತಾನದ ಈ ಕುತಂತ್ರಕ್ಕೆ ಜನತೆ ಕಿವಿಗೊಡಬಾರದು ಎಂದು ಮೇಜ ರಾಜು ಮನವಿ ಮಾಡಿಕೊಂಡರು. ಪಾಕಿಸ್ತಾನದ ಸುಳ್ಳು ಸುದ್ಧಿ ಪ್ರಸಾರವನ್ನು ಸಮಾಪ್ತಿಗೊಳಿಸುವಲ್ಲಿ ದೇಶದ 120 ಕೋಟಿ ಜನಸಂಖ್ಯೆಯ ಪಾತ್ರ ಮಹತ್ತರವಾಗಿದೆ. ಅಸಮಾಧಾನಗೊಂಡು ಹತಾಶವಾಗಿರುವ ಪಾಕ್ ವಿರುದ್ಧ ಸೇನೆ ಯುದ್ಧಕ್ಷೇತ್ರದಲ್ಲಿ ಹೋರಾಟ ಮುಂದುವರಿಸಲಿದೆ. ವಾಸ್ತವ ಮಾಹಿತಿಯನ್ನು ದೇಶದ ಎಲ್ಲೆಡೆ ತಲುಪಿಸಲು ಜನತೆಯ ಸಹಕಾರದ ಅಗತ್ಯವಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News