ದಿಲ್ಲಿಯಲ್ಲಿ ಜುಲೈ ಅಂತ್ಯಕ್ಕೆ ಕೊರೋನ ಪ್ರಕರಣಗಳ ಸಂಖ್ಯೆ 5.5 ಲಕ್ಷಕ್ಕೆ: ಮನೀಷ್ ಸಿಸೋಡಿಯಾ

Update: 2020-06-09 14:09 GMT

ಹೊಸದಿಲ್ಲಿ,ಜೂ.9: ದಿಲ್ಲಿಯಲ್ಲಿ ಕೊರೋನ ವೈರಸ್‌ನ ಸಮುದಾಯ ಹರಡುವಿಕೆಯಿಲ್ಲ ಎಂದು ಕೇಂದ್ರದ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಮಂಗಳವಾರ ಇಲ್ಲಿ ತಿಳಿಸಿದ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು, ಜುಲೈ 31ರ ವೇಳೆಗೆ ನಗರದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಅಂದಾಜು 5.5 ಲಕ್ಷಕ್ಕೆ ಏರಬಹುದು ಮತ್ತು ಆಗ ದಿಲ್ಲಿಗೆ 80,000 ಹಾಸಿಗೆಗಳು ಅಗತ್ಯವಾಗುತ್ತವೆ ಎಂದು ಹೇಳಿದರು.

ಲೆಫ್ಟಿನಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ದಿಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಸೋಡಿಯಾ,ದಿಲ್ಲಿಯಲ್ಲಿ ಕೊರೋನ ವೈರಸ್‌ನ ಸಮುದಾಯ ಪ್ರಸರಣವಿಲ್ಲ ಎಂದು ಕೇಂದ್ರ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದ್ದಾರೆ ಎಂದರು.

ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ದಿಲ್ಲಿ ನಿವಾಸಿಗಳಿಗಾಗಿ ಮಾತ್ರ ಮೀಸಲಿಡುವ ದಿಲ್ಲಿ ಸರಕಾರದ ಆದೇಶವನ್ನು ತಳ್ಳಿಹಾಕುವ ತನ್ನ ನಿರ್ಧಾರವನ್ನು ಮರುಪರಿಶೀಲಿಸಲು ಬೈಜಾಲ್ ನಿರಾಕರಿಸಿದರು ಎಂದೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News