ಗಾಂಧಿ ಪ್ರತಿಮೆ ವಿರೂಪ ಅವಮಾನಕರ: ಟ್ರಂಪ್

Update: 2020-06-09 17:10 GMT

ವಾಶಿಂಗ್ಟನ್, ಜೂ. 9: ಇಲ್ಲಿನ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿರುವುದು ‘ಅವಮಾನಕರ’ವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಬಣ್ಣಿಸಿದ್ದಾರೆ.

ಕರಿಯ ವರ್ಣೀಯ ಜಾರ್ಜ್ ಫ್ಲಾಯ್ಡ್ ಪೊಲೀಸ್ ಬಂಧನದ ವೇಳೆ ಮೃತಪಟ್ಟಿರುವುದನ್ನು ಪ್ರತಿಭಟಿಸಿ ಇತ್ತೀಚೆಗೆ ಅಮೆರಿಕದಲ್ಲಿ ನಡೆದ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ವೇಳೆ ವಾಶಿಂಗ್ಟನ್‌ನಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯ ಮೇಲೆ ಗೀಚಿ ಹಾಗೂ ಪೈಂಟ್ ಎರಚಿ ವಿರೂಪಗೊಳಿಸಲಾಗಿತ್ತು.

ಇಲ್ಲಿನ ಭಾರತೀಯ ರಾಯಭಾರ ಕಚೇರಿಯ ಸಮೀಪದ ರಸ್ತೆಯ ಇನ್ನೊಂದು ಬದಿಯಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಜೂನ್ 2ರ ರಾತ್ರಿ ವಿರೂಪಗೊಳಿಸಲಾಗಿತ್ತು.

‘‘ಹಾಗೆ ಮಾಡಿರುವುದು ಅವಮಾನಕರ’’ ಎಂದು ಸೋಮವಾರ ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News