ಅಲ್ಪಸಂಖ್ಯಾತರ ಮೇಲೆ ಚೀನಾ ದೌರ್ಜನ್ಯ: ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ವರದಿ
Update: 2020-06-11 20:13 IST
ವಾಶಿಂಗ್ಟನ್, ಜೂ. 11: ಅಲ್ಪಸಂಖ್ಯಾತ ಗುಂಪುಗಳು, ಅದರಲ್ಲೂ ಮುಖ್ಯವಾಗಿ ವಾಯುವ್ಯ ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿರುವ ಉಯಿಘರ್ ಮುಸ್ಲಿಮರು ಹಾಗೂ ಕ್ರೈಸ್ತರು, ಮುಸ್ಲಿಮರು, ಟಿಬೆಟನ್ ಬೌದ್ಧರು ಮತ್ತು ಫಲುನ್ ಗೊಂಗ್ ಅನುಯಾಯಿಗಳ ಮೇಲಿನ ಧಾರ್ಮಿಕ ದೌರ್ಜನ್ಯವನ್ನು ಚೀನಾ ತೀವ್ರಗೊಳಿಸುತ್ತಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಬಿಡುಗಡೆಗೊಳಿಸಿದ ವಾರ್ಷಿಕ ಧಾರ್ಮಿಕ ಸ್ವಾತಂತ್ರ್ಯ ವರದಿ ಹೇಳಿದೆ.
ಚೀನಾದಲ್ಲಿ ಪ್ರಜೆಗಳು ಧಾರ್ಮಿಕ ನಂಬಿಕೆಯ ಸ್ವಾತಂತ್ರ್ಯವನ್ನು ಹೊಂದಿದ್ದಾರೆ, ಆದರೆ, ಸರಕಾರವು ಧಾರ್ಮಿಕ ಆಚರಣೆಗೆ ನೀಡಲಾಗುವ ರಕ್ಷಣೆಯನ್ನು ‘ಸಾಮಾನ್ಯ ಧಾರ್ಮಿಕ ಚಟುವಟಿಕೆ’ಗಳಿಗೆ ಸೀಮಿತಗೊಳಿಸಿದೆ ಹಾಗೂ ‘ಸಾಮಾನ್ಯ’ ಎನ್ನುವುದಕ್ಕೆ ವಿವರಣೆ ಕೊಡುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವರದಿ ಹೇಳಿದೆ. ವರದಿಯನ್ನು ಬುಧವಾರ ಅಮೆರಿಕದ ಸಂಸತ್ತು ಕಾಂಗ್ರೆಸ್‌ಗೆ ಸಲ್ಲಿಸಲಾಗಿದೆ.