ದಕ್ಷಿಣ ಭಾರತದ ಪ್ರಸಿದ್ಧ ನಟಿಯ ಕಾರಿನಿಂದ 96 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡ ಪೊಲೀಸರು

Update: 2020-06-13 16:52 GMT

ಚೆನ್ನೈ: ದಕ್ಷಿಣ ಭಾರತದ ಪ್ರಸಿದ್ಧ ನಟಿ ರಮ್ಯಾ ಕೃಷ್ಣನ್ ಅವರ ಕಾರಿನಿಂದ ಪೊಲೀಸರು 96 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಕಾರು ಚಾಲಕ ಸೆಲ್ವಕುಮಾರ್ ನನ್ನು ಬಂಧಿಸಲಾಗಿದೆ.

ಮಹಾಬಲಿಪುರಂನಿಂದ ಬರುತ್ತಿದ್ದ ವಾಹನಗಳ ತಪಾಸಣೆಯನ್ನು ಪೊಲೀಸರು ನಡೆಸುತ್ತಿದ್ದರು ಎನ್ನಲಾಗಿದೆ. ಮುತುಕಾಡು ಚೆಕ್ ಪೋಸ್ಟ್ ಬಳಿ ರಮ್ಯಾ ಕೃಷ್ಣನ್ ಅವರಿದ್ದ ಕಾರನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ವಾಹನದ ತಪಾಸಣೆ ನಡೆಸಿದಾಗ 96 ಮದ್ಯದ ಬಾಟಲಿಗಳು ಪತ್ತೆಯಾಗಿದೆ. ಲಾಕ್ ಡೌನ್ ಸಂದರ್ಭ ಮದ್ಯ ಮಾರಾಟದ ಮೇಲೆ ನಿರ್ಬಂಧವಿರುವುದರಿಂದ ಇಷ್ಟು ಪ್ರಮಾಣದ ಮದ್ಯ ಹೊಂದಿರುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚೆನ್ನೈಯಲ್ಲಿ ಇನ್ನೂ ಮದ್ಯದ ಅಂಗಡಿಗಳನ್ನು ತೆರೆಯಲಾಗಿಲ್ಲ ಮತ್ತು ಮದ್ಯ ಮಾರಾಟ ಹಾಗು ಸಾಗಾಟ ಕಾನೂನುಬಾಹಿರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News