ಫ್ಯಾಕ್ಟ್ ಚೆಕ್: ಅಯೋಧ್ಯೆಯಲ್ಲಿ ಉತ್ಖನನ ವೇಳೆ ಸಂಸ್ಕೃತ ಪತ್ರ ಪತ್ತೆ ಎನ್ನಲಾದ ವೈರಲ್ ವಿಡಿಯೋ ಸುಳ್ಳು

Update: 2020-06-14 09:01 GMT

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ಸ್ಥಳದಲ್ಲಿ ಉತ್ಖನನದ ವೇಳೆ ಸಂಸ್ಕೃತದಲ್ಲಿ ಬರೆಯಲಾದ ಪತ್ರವೊಂದು ಲಭಿಸಿದೆ ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಜಕೀಯ ವಿಶ್ಲೇಷಕ ಪುಷ್ಪೇಂದ್ರ ಕುಲಶ್ರೇಷ್ಠ ಎಂಬುವವರು ಈ 28 ಸೆಕೆಂಡ್‌ಗಳ ವಿಡಿಯೊವನ್ನು ಟ್ವಿಟರ್‌ ನಲ್ಲಿ ಶೇರ್ ಮಾಡಿದ್ದರು. ಅಯೋಧ್ಯೆ ಉತ್ಖನನ ವೇಳೆ ಈ ಪತ್ರ ತಾಮ್ರದ ಪಾತ್ರೆಯ ಒಳಗೆ ಸಿಕ್ಕಿದೆ ಎಂದು ಅವರು ಹೇಳಿಕೊಂಡಿದ್ದರು. ಇದನ್ನು 2000 ಮಂದಿ ಮರು ಟ್ವೀಟ್ ಮಾಡಿದ್ದರು ಹಾಗೂ 9 ಸಾವಿರ ಲೈಕ್ ಬಂದಿತ್ತು. ಅಯೋಧ್ಯೆಯಲ್ಲಿ ಮೂಲ ದೇವಸ್ಥಾನ ಇತ್ತು ಎನ್ನುವುದಕ್ಕೆ ಇದು ಕಾಲದ ಪುರಾವೆ ಎಂದು ಹೇಳಿಕೊಂಡು ಹಲವರು ಇದನ್ನು ಫೇಸ್‌ಬುಕ್ ಸೇರಿದಂತೆ ವಿವಿಧೆಡೆ ಹರಡಿದರು. ಇದರಲ್ಲಿರುವ ಬರಹ ಸಂಸ್ಕೃತ ಎಂದು ಹಲವರು ಹೇಳಿದರು.

ವಾಸ್ತವವೇನು?

ಇದರ ಸತ್ಯಾಸತ್ಯತೆಯನ್ನು theprint.in ಪರಿಶೀಲಿಸಿದ್ದು, ಈ ವೈರಲ್ ವಿಡಿಯೊವನ್ನು
define.avcilari ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಎಪ್ರಿಲ್ 9ರಂದು ಶೇರ್ ಮಾಡಲಾಗಿದೆ. ಈ ಖಾತೆ ಒಬ್ಬ ಹವ್ಯಾಸಿ ಕಲಾಕಾರರದ್ದಾಗಿದ್ದು, ಅಪರೂಪದ ಕಲಾಕೃತಿ, ನಾಣ್ಯಗಳ ಚಿತ್ರಗಳನ್ನು ಅವರು ಪೋಸ್ಟ್ ಮಾಡುತ್ತಾರೆ.

SM Hoax Slayer ಫ್ಯಾಕ್ಟ್ ಚೆಕ್ ಪ್ರಕಾರ, ಪತ್ರದಲ್ಲಿರುವುದು ಸಂಸ್ಕೃತ ಭಾಷೆಯಲ್ಲ, ಬದಲಾಗಿ ಹಿಬ್ರೂ ಭಾಷೆ. ಇದರಲ್ಲಿರುವ ಸಂಕೇತವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಯಹೂದಿಯರದ್ದು ಹೊರತು ಹಿಂದೂಗಳದ್ದಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News