‘ಕ್ಷಣಿಕ ಜೀವನ’: ಕೊನೆಯ ಇನ್ ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಸುಶಾಂತ್ ಸಿಂಗ್ ತಾಯಿಯ ಬಗ್ಗೆ ಹೇಳಿದ್ದು ಹೀಗೆ…

Update: 2020-06-14 10:46 GMT

ಹೊಸದಿಲ್ಲಿ: ಇಂದು ಮುಂಬೈಯ ಬಾಂದ್ರಾದ ತಮ್ಮ ಮನೆಯಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಇತ್ತೀಚೆಗಷ್ಟೇ ತಮ್ಮ ತಾಯಿಯ ಬಗ್ಗೆ ಪೋಸ್ಟ್ ಒಂದನ್ನು ಹಾಕಿದ್ದರು.

ಸುಶಾಂತ್ ಸಿಂಗ್ 16 ವರ್ಷದವರಾಗಿದ್ದಾಗ ಅವರ ತಾಯಿ 2002ರಲ್ಲಿ ನಿಧನರಾಗಿದ್ದರು. ಜೂನ್ 3ರಂದು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದ ಸುಶಾಂತ್ ಸಿಂಗ್, “ಮಸುಕಾದ ಗತಕಾಲ ಕಣ್ಣೀರಿನ ಹನಿಗಳಿಂದ ಆವಿಯಾಗುತ್ತಿದೆ. ಕೊನೆಯಾಗದ ಕನಸುಗಳು ನಗುವೊಂದನ್ನು ಕೆತ್ತುತ್ತಿದೆ, ಮತ್ತು ಕ್ಷಣಿಕ ಜೀವನ ನಮ್ಮಿಬ್ಬರ ನಡುವೆ ಮಾತುಕತೆ ನಡೆಸುತ್ತಿದೆ… ಅಮ್ಮಾ” ಎಂದು ತಮ್ಮ ಮತ್ತು ತಾಯಿಯ ಫೋಟೊ ಹಾಕಿ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News