×
Ad

ಭಾರತದಲ್ಲಿ ತಾಪಮಾನ 4.4 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿಕೆಯಾಗಲಿದೆ: ಸರಕಾರದ ವರದಿ

Update: 2020-06-15 18:11 IST

ಹೊಸದಿಲ್ಲಿ: ಭಾರತದ ಸರಾಸರಿ ತಾಪಮಾನ ಈ ಶತಮಾನದ ಅಂತ್ಯದ ವೇಳೆಗೆ 4.4 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿಕೆಯಾಗಿ  ಬಿಸಿಲಿನ ಧಗೆ ಮೂರರಿಂದ ನಾಲ್ಕು ಪಟ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಬದಲಾವಣೆ ಕುರಿತ ಸರಕಾರದ ವರದಿ ಹೇಳಿದೆ.

ಭಾರತದ ಸರಾಸರಿ ತಾಪಮಾನ 1901-2018ರ ನಡುವೆ ಸುಮಾರು 0.7 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿಕೆಯಾಗಿದೆ ಹಾಗೂ ಇದು ಹಸಿರು ಮನೆ ಅನಿಲಗಳಿಂದ (ಗ್ರೀನ್ ಹೌಸ್ ಗ್ಯಾಸ್) ಉಂಟಾಗಿದೆ ಎಂದು ಭೂ ವಿಜ್ಞಾನ ಸಚಿವಾಲಯದ ವರದಿ ತಿಳಿಸಿದೆ. ಈ ಮಾಹಿತಿಯನ್ನು ಕೇಂದ್ರ ಸಚಿವ ಹರ್ಷವರ್ಧನ್ ಮಂಗಳವಾರ ಬಿಡುಗಡೆಗೊಳಿಸುವ ಸಾಧ್ಯತೆಯಿದೆ.

ವರದಿಯನ್ನು ಭೂವಿಜ್ಞಾನಗಳ ಸಚಿವಾಲಯದ ಅಧೀನದಲ್ಲಿ ಬರುವ ಪುಣೆಯ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮಿಟ್ಯೊರಾಲಜಿಯ ಘಟಕವಾದ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ ರಿಸರ್ಚ್ ತಯಾರಿಸಿದೆ.

ಭಾರತದಲ್ಲಿ 1986-2015ರ ನಡುವಿನ 30 ವರ್ಷಗಳ ಅವಧಿಯಲ್ಲಿ ಗರಿಷ್ಠ ತಾಪಮಾನದ ದಿನ ಹಾಗೂ ಕನಿಷ್ಠ ತಾಪಮಾನದ ರಾತ್ರಿಯಲ್ಲಿ ತಾಪಮಾನ ಕ್ರಮವಾಗಿ 0.63 ಹಾಗೂ 0.4  ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿಕೆಯಾಗಿದೆ.

ಈ ಶತಮಾನದ ಅಂತ್ಯದೊಳಗೆ ಗರಿಷ್ಠ ತಾಪಮಾನದ ದಿನ ಹಾಗೂ ಕನಿಷ್ಠ ತಾಪಮಾನದ ರಾತ್ರಿಯ  ತಾಪಮಾನಗಳಲ್ಲಿ  ಕ್ರಮವಾಗಿ 4.7 ಹಾಗೂ 5.5 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿಕೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News