ಈ ಸ್ಯಾನಿಟೈಸರ್ ಬಳಕೆ ಅಪಾಯಕಾರಿ: ಸಿಬಿಐ ನೀಡಿದ ಎಚ್ಚರಿಕೆ

Update: 2020-06-15 17:20 GMT

ಹೊಸದಿಲ್ಲಿ, ಜೂ.15: ಕೈಗಳನ್ನು ತೊಳೆಯಲು ತೀವ್ರ ವಿಷಕಾರಿ ಮೆಥನಾಲ್ ಯುಕ್ತ ಸ್ಯಾನಿಟೈಸರ್ ಬಳಸುವುದು ಮನುಷ್ಯನ ದೇಹಕ್ಕೆ ಅಪಾಯಕಾರಿ ಎಂದು ಸಿಬಿಐ ಎಲ್ಲಾ ಕಾನೂನು ಜಾರಿ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ.

ಕೊರೋನ ಸೋಂಕು ಹೆಚ್ಚುತ್ತಿರುವ ಹಾಗೂ ಸ್ಯಾನಿಟೈಸರ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಕೆಲವು ಸಂಸ್ಥೆಗಳು ಮೆಥನಾಲ್ ಬಳಸಿ ನಕಲಿ ಸ್ಯಾನಿಟೈಸರ್ ಉತ್ಪಾದಿಸುವ ಸಾಧ್ಯತೆಯಿದೆ ಎಂಬ ಇಂಟರ್‌ಪೋಲ್ ವರದಿಯ ಹಿನ್ನೆಲೆಯಲ್ಲಿ ಸಿಬಿಐ ಈ ಎಚ್ಚರಿಕೆ ನೀಡಿದೆ. ಇಂತಹ ಪ್ರಕರಣಗಳು ಕೆಲವು ದೇಶಗಳಲ್ಲಿ ವರದಿಯಾಗಿವೆ. ಮೆಥನಾಲ್ ಬಳಕೆ ಮನುಷ್ಯನ ದೇಹಕ್ಕೆ ಅಪಾಯಕಾರಿ ಎಂದು ಇಂಟರ್‌ಪೋಲ್ ತಿಳಿಸಿದೆ.

ಜೊತೆಗೆ, ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವೈಯಕ್ತಿಕ ಸುರಕ್ಷಾ ಸಾಧನ(ಪಿಪಿಇ), ಮಾಸ್ಕ್ , ಕೈಗವಸು ಮತ್ತಿತರ ವಸ್ತುಗಳನ್ನು ಆನ್‌ಲೈನ್ ಮೂಲಕ ರಿಯಾಯಿತಿ ದರದಲ್ಲಿ ಒದಗಿಸುವ ಭರವಸೆ ನೀಡಿ ವಂಚಿಸುವ ಜಾಲವೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿದೆ. ಇವರ ಭರವಸೆ ನಂಬಿ ಬ್ಯಾಂಕ್‌ನಿಂದ ಹಣ ವರ್ಗಾವಣೆ ಮಾಡಿದರೆ ಮೋಸದ ಬಲೆಗೆ ಬೀಳುತ್ತೀರಿ ಎಂದು ಸಿಬಿಐ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News