ಸುಶಾಂತ್ ಸಿಂಗ್ ಸಾವಿನಿಂದ ನೊಂದ ಬಾಲಕ ಆತ್ಮಹತ್ಯೆ
Update: 2020-06-16 21:26 IST
ಲಕ್ನೋ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನಿಂದ ನೊಂದ ಅವರ ಅಭಿಮಾನಿ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.
ಸುಶಾಂತ್ ಅವರ ಸಾವಿನ ಸುದ್ದಿ ಕೇಳಿ ಉತ್ತರ ಪ್ರದೇಶದ ಬರೇಲಿಯ 10ನೆ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಆತ್ಮಹತ್ಯೆಗೂ ಮುನ್ನ ಬಾಲಕ ಪತ್ರವೊಂದರಲ್ಲಿ ‘ಅವರು ಇದನ್ನು ಮಾಡುವುದಾದರೆ ನಾನೇಕೆ ಮಾಡಬಾರದು” ಎಂದು ಬರೆದಿದ್ದಾನೆ ಎನ್ನಲಾಗಿದೆ.