ಸುಷಾಂತ್ ಸಿಂಗ್ ಅತ್ತಿಗೆ ನಿಧನ

Update: 2020-06-16 18:32 GMT

ಹೊಸದಿಲ್ಲಿ, ಜೂ.16: ಬಾಲಿವುಡ್ ನಟ ಸುಷಾಂತ್ ಸಿಂಗ್ ರಜಪೂತ್ ಅವರ ಅನಿರೀಕ್ಷಿತ ಸಾವಿನಿಂದ ಆಗಿದ್ದ ಆಘಾತದಿಂದ ಚೇತರಿಸಿಕೊಳ್ಳದೆ ಅವರ ಅತ್ತಿಗೆಯೂ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಸುಷಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ತಿಳಿದ ಬಳಿಕ ಆಘಾತಗೊಂಡಿದ್ದ ಅವರ ಚಿಕ್ಕಪ್ಪನ ಮಗನ ಪತ್ನಿ (ಸುಷಾಂತ್‌ಗೆ ಅತ್ತಿಗೆಯಾಗುತ್ತಾರೆ) ಸುಧಾದೇವಿ ಬಿಹಾರದ ಪೂರ್ನಿಯಾದಲ್ಲಿರುವ ತನ್ನ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮುಂಬೈಯಲ್ಲಿ ಸುಷಾಂತ್ ಸಿಂಗ್ ಅಂತ್ಯಸಂಸ್ಕಾರ ನಡೆಸಿದ ಬೆನ್ನಿಗೇ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ಸುಷಾಂತ್ ಬಗ್ಗೆ ತೀವ್ರ ಅಕ್ಕರೆ ಹೊಂದಿದ್ದ ಸುಧಾ ದೇವಿ, ಸುಷಾಂತ್ ಆತ್ಮಹತ್ಯೆ ಮಾಡಿಕೊಂಡಂದಿನಿಂದ ಉಪವಾಸವಿದ್ದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News