ಚಂದ್ರನ ಅಂಗಳದಲ್ಲಿ ಭೂಮಿ ಖರೀದಿಸಿದ್ದರು ಸುಶಾಂತ್ ಸಿಂಗ್ !

Update: 2020-06-17 08:07 GMT

ಮುಂಬೈ:  ಆತ್ಮಹತ್ಯೆಗೆ ಶರಣಾಗಿ ದುರಂತ ಅಂತ್ಯ ಕಂಡ ಬಾಲಿವುಡ್‍ನ ಪ್ರತಿಭಾನ್ವಿತ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಖಗೋಳವಿಜ್ಞಾನದಲ್ಲಿ ಹೊಂದಿದ್ದ ಆಸಕ್ತಿಯ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಅವರ ಬಳಿ ಅತ್ಯುನ್ನತ ಟೆಲಿಸ್ಕೋಪ್ ಮೀಡ್ 14 ಎಲ್‍ಎಕ್ಸ್-600 ಕೂಡ ಇತ್ತು. ತಮ್ಮ ಬಿಡುವಿನ ವೇಳೆ ಅವರು ದೂರದ ಆಗಸವನ್ನು, ಗ್ರಹಗಳನ್ನು ನೋಡುತ್ತಾ ಸಮಯ ಕಳೆಯುತ್ತಿದ್ದರು. ಈ ಟೆಲಿಸ್ಕೋಪ್ ಅನ್ನು ಅವರು ಸಮುದ್ರಕ್ಕೆ ಅಭಿಮುಖವಾಗಿರುವ ಮನೆಯ ಕಿಟಕಿ ಪಕ್ಕದಲ್ಲಿಯೇ ಅವರು ಇರಿಸಿದ್ದರು.

ಸುಶಾಂತ್ ಬಗ್ಗೆ ಇನ್ನೊಂದು ವಿಚಾರವೂ ಇದೆ. ಚಂದಿರನ ಮೇಲಿನ ಒಂದು ತುಂಡು ಭೂಮಿಯನ್ನೂ ಅವರು ಖರೀದಿಸಿದ್ದರು. ಚಂದ್ರನ ಮಾರ್ ಮ್ಯುಸ್ಕೊವೀನ್ಸ್ ಅಥವಾ ‘ಸೀ ಆಫ್ ಮುಸ್ಕೋವಿ’ ಎಂಬ ಪ್ರಾಂತ್ಯದಲ್ಲಿ ಅವರು ಈ ಜಾಗವನ್ನು ಇಂಟರ್‍ ನ್ಯಾಷನಲ್ ಲೂನಾರ್ ಲ್ಯಾಂಡ್ಸ್ ರಿಜಿಸ್ಟ್ರಿಯಿಂದ ಖರೀದಿಸಿದ್ದರಲ್ಲದೆ ಅದನ್ನು  ಜೂನ್ 25, 2018ರಂದು ನೋಂದಾಯಿಸಿದ್ದರು.

ಆದರೆ ಕಾನೂನುಬದ್ಧ ಒಡೆತನವೆಂದು ಇದನ್ನು ಹೇಳಲು ಸಾಧ್ಯವಿಲ್ಲ ಏಕೆಂದರೆ ಭೂಮಿಯ ಹೊರಗಿನ  ಬಾಹ್ಯಾಕಾಶ, ಚಂದ್ರ ಮತ್ತಿತರ ಉಪಗ್ರಹಗಳು ಮನುಕುಲಕ್ಕೆ ಸೇರಿದ್ದು. ಅವುಗಳ ಒಡೆತನವನ್ನು ಯಾವುದೇ ಒಂದು ದೇಶ ಹೊಂದಲು ಸಾಧ್ಯವಿಲ್ಲ ಎಂದು ಸದ್ಯ ಇರುವ ನಿಯಮಗಳು ಹೇಳುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News