ಸರಕಾರದ ವಿರುದ್ಧ ಪ್ರಶಾಂತ್ ಕಿಶೋರ್ ಅವರ ‘ಆತ್ಮನಿರ್ಭರ್’ ಪ್ರಹಾರ

Update: 2020-06-19 11:39 GMT

ಹೊಸದಿಲ್ಲಿ: ದೇಶವನ್ನು ಕಾಡುತ್ತಿರುವ ಕೊರೋನ ವೈರಸ್ ಹಾವಳಿ, ಆರ್ಥಿಕ ನಿಧಾನಗತಿ, ಜತೆಗೆ ಭಾರತ-ಚೀನಾ ಗಡಿ ಉದ್ವಿಗ್ನತೆಯ ನಡುವೆಯೇ ಸರಕಾರದ ‘ತಪ್ಪಾದ' ಆದ್ಯತೆಗಳ ಕುರಿತಂತೆ ಇಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಕೇಂದ್ರ ಸರಕಾರದ  ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿರುವ ನಡುವೆಯೇ ಟ್ವೀಟ್ ಮಾಡಿದ ಅವರು, “ನಮ್ಮ ನಾಯಕತ್ವದ ದೃಢತೆ ನಮ್ಮೆಲ್ಲರ ಮುಂದಿದೆ'' ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಭಾರತವನ್ನು ‘ಆತ್ಮನಿರ್ಭರ್’ ಅಥವಾ ಸ್ವಾವಲಂಬಿ ಮಾಡುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ  ನೀಡಿದ ಸತತ ಕರೆಗಳನ್ನು  ಟೀಕಿಸಿದ ಪ್ರಶಾಂತ್ ಕಿಶೋರ್, ಪ್ರಧಾನಿಯ ಇದೇ ಘೋಷವಾಕ್ಯವನ್ನು ಕೈಗೆತ್ತಿಕೊಂಡು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  “ರಾಜ್ಯಗಳಲ್ಲಿ ಚುನಾವಣೆ ತಯಾರಿ ಅಥವಾ ರಾಜ್ಯಸಭಾ ಸ್ಥಾನಗಳಿಗೆ ಮತದಾನ, ನಮ್ಮ ವ್ಯವಸ್ಥೆಯ  ಕಾರ್ಯತತ್ಪರತೆ ಹಾಗೂ ನಮ್ಮ ನಾಯಕತ್ವದ ದೃಢತೆ ನಮ್ಮೆಲ್ಲರ ಮುಂದಿದೆ ! ಉಳಿದಂತೆ #ಚೀನಾದಿಂದ #ಕೋವಿಡ್ ಹಾಗೂ #ಆರ್ಥಿಕ ನಿಧಾನಗತಿ ತನಕ ಎಲ್ಲವನ್ನೂ  #ಆತ್ಮನಿರ್ಭರ್_ಭಾರತದ ಜನರೇ ನಿಭಾಯಿಸಬೇಕಿದೆ'' ಎಂದು ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News