×
Ad

ಭಾರೀ ಶಬ್ಧದೊಂದಿಗೆ ಭೂಮಿಗೆ ಅಪ್ಪಳಿಸಿದ ಉಲ್ಕಾಶಿಲೆಯಂತಹ ವಸ್ತು: ಗಾಬರಿಗೊಂಡ ಗ್ರಾಮಸ್ಥರು

Update: 2020-06-20 15:16 IST

ಜೈಪುರ್ : ರಾಜಸ್ಥಾನದ ಜಲೋರ್ ಜಿಲ್ಲೆಯ ಸಂಚೋರೆ ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ಉಲ್ಕಾಶಿಲೆಯಂತಹ ವಸ್ತುವೊಂದು ಭೂಮಿ ಮೇಲೆ ಬಿದ್ದು  2ರಿಂದ 3 ಅಡಿ ಆಳದ  ಹೊಂಡ ಸೃಷ್ಟಿಸಿದೆ.

ಈ ಸ್ಥಳದ ಸುತ್ತಮುತ್ತಲಿನ ನಿವಾಸಿಗಳು ತಮಗೆ ಸ್ಫೋಟದ ಸದ್ದು ಕೇಳಿತೆಂದು ತಿಳಿಸಿದ್ದಾರೆ. ನಂತರ ಹುಡುಕಾಡಿದಾಗ ಪಟ್ಟಣದ ಗಾಯತ್ರಿ ಚೌಕ್ ಸಮೀಪ ದೊಡ್ಡ ಕಲ್ಲಿನಂತಹ ವಸ್ತುವನ್ನು ಕಂಡಿದ್ದಾರೆ.

ಈ ಉಲ್ಕಾಶಿಲೆಯಂತಹ ವಸ್ತು  ಶುಕ್ರವಾರ ಕಾಣಿಸಿದ್ದು ಅದು ಸುಮಾರು 2.8 ಕೆಜಿ ತೂಗುತ್ತಿದೆ, ಈ ವಸ್ತು ಬಿದ್ದ ಸ್ಥಳದ ಸುತ್ತಮುತ್ತ ಯಾರನ್ನೂ ಬಿಡಲಾಗುತ್ತಿಲ್ಲ. ಈ ವಸ್ತುವನ್ನು ಹೆಚ್ಚಿನ ಅಧ್ಯಯನಕ್ಕಾಗಿ ದಿಲ್ಲಿಗೆ ಕಳುಹಿಸಲಾಗುವುದು ಎಂದು ಸಂಚೋರೆ ಉಪವಿಭಾಗಾಧಿಕಾರಿ ಭೂಪೇಂದ್ರ ಯಾದವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News