ಬ್ರಿಟನ್: ಉದ್ಯಾನದಲ್ಲಿ ಚೂರಿ ದಾಳಿ; 3 ಸಾವು

Update: 2020-06-21 15:40 GMT

ರೀಡಿಂಗ್ (ಬ್ರಿಟನ್), ಜೂ. 21: ದಕ್ಷಿಣ ಇಂಗ್ಲೆಂಡ್‌ನ ರೀಡಿಂಗ್ ಪಟ್ಟಣದ ಉದ್ಯಾನವೊಂದರಲ್ಲಿ ಶನಿವಾರ ವ್ಯಕ್ತಿಯೊಬ್ಬ ನಡೆಸಿದ ಚೂರಿ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಹಾಗೂ ಮೂವರು ಗಾಯಗೊಂಡಿದ್ದಾರೆ.

ರೀಡಿಂಗ್ ‌ನಲ್ಲಿ ಶನಿವಾರ ಬೇಸಿಗೆಯ ಸಂಜೆಯ ಬಿಸಿಲನ್ನು ಸವಿಯಲು ಜನರು ಫೋರ್ಬರಿ ಗಾರ್ಡನ್ಸ್‌ನಲ್ಲಿ ನೆರೆದಿದ್ದರು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಅಲ್ಲಿ ಸೇರಿದವರನ್ನು ಮನಬಂದಂತೆ ಚೂರಿಯಿಂದ ಇರಿಯಲು ಆರಂಭಿಸಿದನು.

ಘಟನೆಗೆ ಸಂಬಂಧಿಸಿ 25 ವರ್ಷದ ವ್ಯಕ್ತಿಯೊಬ್ಬನನ್ನು ರೀಡಿಂಗ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿಗಳಿಗಾಗಿ ನಡೆಸುತ್ತಿರುವ ಶೋಧವನ್ನು ಈಗ ನಿಲ್ಲಿಸಲಾಗಿದೆ ಎಂದು ಅವರು ಹೇಳಿದರು.

‘‘ಅಲ್ಲಿ ಸಾರ್ವಜನಿಕರಿಗೆ ಇನ್ನಷ್ಟು ಅಪಾಯವಿದೆ ಎಂಬುದಾಗಿ ಗುಪ್ತಚರ ವರದಿಗಳು ತಿಳಿಸಿಲ್ಲ. ಆದರೂ, ಎಚ್ಚರಿಕೆಯಿಂದ ಇರುವಂತೆ ಹಾಗೂ ಏನಾದರೂ ಸಂಶಯಾಸ್ಪದ ಸಂಗತಿ ಕಂಡುಬಂದರೆ ಪೊಲೀಸರಿಗೆ ತಿಳಿಸುವಂತೆ ನಾವು ಜನರನ್ನು ಒತ್ತಾಯಿಸುತ್ತೇವೆ’’ ಎಂದು ಪತ್ತೇದಾರ ಚೀಫ್ ಸೂಪರಿಂಟೆಂಡೆಂಟ್ ಇಯಾನ್ ಹಂಟರ್ ತಿಳಿಸಿದರು.

‘‘ಸದ್ಯಕ್ಕೆ ಇದನ್ನು ಭಯೋತ್ಪಾದಕ ಘಟನೆಯನ್ನಾಗಿ ಪರಿಗಣಿಸಲಾಗಿಲ್ಲ. ಆದರೆ, ಘಟನೆಯ ಉದ್ದೇಶದ ಬಗ್ಗೆ ಪೊಲೀಸರು ಈವರೆಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಅವರಿಗೆ ಆಗ್ನೇಯ ಭಯೋತ್ಪಾನೆ ನಿಗ್ರಹ ಘಟಕದ ಪೊಲೀಸರು ಈ ವಿಷಯದಲ್ಲಿ ನೆರವು ನೀಡುತ್ತಿದ್ದಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News