ವಾಸ್ತವ ಸ್ಥಿತಿಯನ್ನು ಅರಿಯಲು ಕಾಶ್ಮೀರ ಮತ್ತು ಲೇಹ್‌ಗೆ ಭೇಟಿ ನೀಡಲಿರುವ ಜ.ನರವಾಣೆ

Update: 2020-06-22 15:54 GMT

 ಹೊಸದಿಲ್ಲಿ,ಜೂ.22: ಲೇಹ್ ಮತ್ತು ಕಾಶ್ಮೀರದಲ್ಲಿನ ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಲು ಭಾರತೀಯ ಸೇನೆಯ ಮುಖ್ಯಸ್ಥ ಜ.ಎಂ.ಎಂ.ನರವಾಣೆ ಅವರು ಈ ವಾರ ಅಲ್ಲಿಗೆ ಭೇಟಿ ನೀಡಲಿದ್ದಾರೆ.

ವಾರದ ಹಿಂದೆ ಚೀನಿ ಸೈನಿಕರೊಂದಿಗೆ ಹಿಂಸಾತ್ಮಕ ಘರ್ಷಣೆಗಳ ಬಳಿಕ ಸಾವಿರಾರು ಭಾರತೀಯ ಯೋಧರನ್ನು ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯ ಕೆಲವೇ ಮೀಟರ್‌ಗಳ ಅಂತರದಲ್ಲಿ ನಿಯೋಜಿಸಲಾಗಿದ್ದು,ಪೂರ್ವ ಲಡಾಖ್ ಪ್ರದೇಶದಲ್ಲಿ ಹೆಚ್ಚಿರುವ ಬೆದರಿಕೆಯ ನಡುವೆಯೇ ಜ.ನರವಾಣೆ ಅವರ ಭೇಟಿ ನಡೆಯಲಿದೆ.

ಜ.ನರವಾಣೆ ಅವರು ಪಡೆಗಳ ಸನ್ನದ್ಧತೆ ಮತ್ತು ಚೀನಾದೊಂದಿಗಿನ ಎಲ್‌ಎಸಿಯಲ್ಲಿ ಮತ್ತು ಪಾಕಿಸ್ತಾನದ ಜೊತೆಗಿನ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಯೋಧರ ನಿಯೋಜನೆಯನ್ನು ಪುನರ್‌ಪರಿಶೀಲಿಸಲಿದ್ದಾರೆ. ಅವರು ಮಂಗಳವಾರ ಈ ಪ್ರದೇಶಗಳಿಗೆ ಭೇಟಿನೀಡುವ ಸಾಧ್ಯತೆಯಿದೆ.

                             

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News