ಕರಿಯ ವ್ಯಕ್ತಿಯ ಮೇಲೆ ಉಸಿರುಗಟ್ಟಿಸುವ ಪಟ್ಟು: ನ್ಯೂಯಾರ್ಕ್ ಪೊಲೀಸ್ ಸಿಬ್ಬಂದಿ ಅಮಾನತು

Update: 2020-06-23 16:23 GMT

ನ್ಯೂಯಾಕ್, ಜೂ. 23: ಉಸಿರುಗಟ್ಟಿಸುವ ಪಟ್ಟಿನ ಮೂಲಕ ಓರ್ವ ಕರಿಯ ವ್ಯಕ್ತಿ ಪ್ರಜ್ಞೆ ತಪ್ಪುವಂತೆ ಮಾಡಿರುವ ವೀಡಿಯೊವೊಂದು ಬಹಿರಂಗಗೊಂಡ ಬಳಿಕ ನ್ಯೂಯಾರ್ಕ್ ನಗರದ ಪೊಲೀಸ್ ಸಿಬ್ಬಂದಿಯೋರ್ವನ್ನು ಅಮಾನತುಗೊಳಿಸಲಾಗಿದೆ. ಪೊಲೀಸರು ಉಸಿರುಗಟ್ಟಿಸುವ ಪಟ್ಟನ್ನು ಬಳಸುವುದನ್ನು ನ್ಯೂಯಾರ್ಕ್ ನಗರಾಡಳಿತವು ಈಗಾಗಲೇ ಅಪರಾಧ ಎಂಬುದಾಗಿ ಘೋಷಿಸಿದೆ.

ಬಂಧನ ಕಾರ್ಯಾಚರಣೆಯೊಂದರ ವೇಳೆ ಓರ್ವ ಪೊಲೀಸ್ ಸಿಬ್ಬಂದಿ ಉಸಿರುಗಟ್ಟಿಸಿರುವ ಪಟ್ಟು ಬಳಸಿರುವುದು ಆಘಾತಕರ ಎಂಬುದಾಗಿ ನ್ಯೂಯಾರ್ಕ್ ನಗರ ಪೊಲಿಸ್ ಕಮಿಶನರ್ ಡರ್ಮಟ್ ಶೀಯ ಬಣ್ಣಿಸಿದರು. ಆರೋಪಿ ಪೊಲೀಸ್ ಸಿಬ್ಬಂದಿಯನ್ನು ರವಿವಾರ ವೇತನವಿಲ್ಲದೆ ಅಮಾನತಿನಲ್ಲಿಡಲಾಗಿದೆ ಹಾಗೂ ಪೂರ್ಣ ಪ್ರಮಾಣದ ತನಿಖೆ ನಡೆಯಲಿದೆ ಎಂದು ಅವರು ತಿಳಿಸಿದರು.

ಮಿನಪೊಲಿಸ್ ನಗರದಲ್ಲಿ ಮೇ 25ರಂದು ಬಿಳಿಯ ಪೊಲೀಸ್ ಅಧಿಕಾರಿಯೊಬ್ಬ ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡಾರನ್ನು ಬಂಧಿಸುವ ವೇಳೆ ಬಂಧಿತನು ಉಸಿರುಗಟ್ಟಿ ಮೃತಪಟ್ಟ ಘಟನೆಯ ಬಳಿಕ ಪೊಲೀಸ್ ಕಾರ್ಯವಿಧಾನಗಳ ಮೇಲೆ ಸಾರ್ವಜನಿಕರು ಹೆಚ್ಚಿನ ನಿಗಾ ಇಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News