ಮುಂಬೈ: ಕನಿಷ್ಠ 70 ಕೋವಿಡ್-19 ರೋಗಿಗಳು ನಾಪತ್ತೆ

Update: 2020-06-23 18:09 GMT

ಮುಂಬೈ, ಜೂ.23: ಕಳೆದ ಮೂರು ತಿಂಗಳುಗಳಲ್ಲಿ ಮುಂಬೈ ಮಹಾನಗರದಿಂದ ಕನಿಷ್ಠ 70 ಮಂದಿ ಕೊರೋನ ವೈರಸ್ ರೋಗಿಗಳು ನಾಪತ್ತೆಯಾಗಿದ್ದಾರೆ. ಅವರನ್ನು ಪತ್ತೆಹಚ್ಚಲು ಬೃಹನ್ಮುಂಬಯಿ ಮಹಾನಗರ ಪಾಲಿಕೆಯು ಪೊಲೀಸರ ನೆರವನ್ನು ಕೋರಿದೆ.

‘‘ನಾಪತ್ತೆಯಾದ ಮುಂಬೈನ ಉಪನಗರವಾದ ಮಲಾಡ್ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಈ ರೋಗಿಗಳು ತಮ್ಮ ಮೊಬೈಲ್‌ಪೋನ್‌ಗಳನ್ನು ಸ್ವಿಚ್‌ಆಫ್ ಮಾಡಿರುವುದರಿಂದ ಅವರನ್ನು ಪತ್ತೆಹಚ್ಚುವುದೇ ಕಷ್ಟಕರವಾಗಿದೆ.

ನಾಪತ್ತೆಯಾದ ರೋಗಿಗಳನ್ನು ಪತ್ತೆಹಚ್ಚಲು ಅವರ ಮೊಬೈಲ್ ಸಂಖ್ಯೆ, ಆಧಾರ್‌ಕಾರ್ಡ್‌ನ ಪ್ರತಿಗಳು ಹಾಗೂ ಇತರ ಮಾಹಿತಿಗಳನ್ನು ಪೊಲೀಸರಿಗೆ ನೀಡಲಾಗಿದೆ. ಇದರಿಂದಾಗಿ ಅವರನ್ನು ಪತ್ತೆಹಚ್ಚುವುದು ಸುಲಭವಾಗಲಿದೆಯೆಂದು ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ರೋಗಿಗಳ ತಪಾಸಣೆ ನಡೆಸುವ ಸಂದರ್ಭದಲ್ಲಿ ಅವರಿಂದ ಈ ಮಾಹಿತಿಗಳನ್ನು ಸಂಗ್ರಹಿಸಲಾಗಿತ್ತು. ರೋಗಿಗಳನ್ನು ಪತ್ತೆಹಚ್ಚಲು ಅವರ ಮೊಬೈಲ್‌ಫೋನ್‌ಗಳ ಐಎಂಇಐ ಸಂಖ್ಯೆಯನ್ನು ಪೊಲೀಸರು ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ನಾಪತ್ತೆಯಾದವರೆಲ್ಲರೂ ವಲಸೆ ಕಾರ್ಮಿಕರಾಗಿದ್ದು, ಅವರು ನಗರವನ್ನು ತೊರೆದಿರುವ ಸಾಧ್ಯತೆಯೆಂದು ಬೃಹನ್ಮುಂಬಯಿ ಪಾಲಿಕೆ ಅಧಿಕಾರಿ ತಿಳಿಸಿದ್ದಾರೆ.

ಕಾಣೆಯಾಗಿರುವ ರೋಗಿಗಳನ್ನು ಪತ್ತೆ ಹಚ್ಚಲು ತನಿಖೆ ನಡೆಸುತ್ತಿರುವುದಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ. ಈ ವಿಷಯವಾಗಿ ಬೇಜವಾಬ್ದಾರಿಯಿಂದ ರ್ತಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News