×
Ad

ಕೋವಿಡ್ ವಿರುದ್ಧ ಹೋರಾಟಕ್ಕೆ ಕೇರಳ ಆರೋಗ್ಯ ಸಚಿವೆ ಶೈಲಜಾರಿಗೆ ವಿಶ್ವಸಂಸ್ಥೆ ಗೌರವ

Update: 2020-06-24 12:11 IST

ಹೊಸದಿಲ್ಲಿ, ಜೂ.24: ವಿಶ್ವಸಂಸ್ಥೆ ಮಂಗಳವಾರ ಸಾರ್ವಜನಿಕ ಸೇವಾ ದಿನಾಚರಣೆಯಂದು (ಪಬ್ಲಿಕ್ ಸರ್ವಿಸ್ ಡೇ )ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯನ್ನು ತಡೆಗಟ್ಟಲು ಹೋರಾಟ ನಡೆಸಿದವರನ್ನು ಗೌರವಿಸಿದ್ದು, ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ಕೂಡ ವಿಶ್ವಸಂಸ್ಥೆಯ ಗೌರವಕ್ಕೆ ಪಾತ್ರರಾಗಿದ್ದಾರೆ.

ಕಾರ್ಯಕ್ರಮವು ವರ್ಚ್ಯುಲ್ ಪ್ಲಾಟ್‌ಫಾರ್ಮ್‌ನಲ್ಲಿ ನಡೆದಿತ್ತು. ಕಾರ್ಯಕ್ರಮದಲ್ಲಿ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟಿನೊ ಗುಟೆರೆಸ್ ಹಾಗೂ ವಿಶ್ವಸಂಸ್ಥೆಯ ಇತರ ಉನ್ನತ ಗಣ್ಯರು ಭಾಗವಹಿಸಿದ್ದರು. ಕೋವಿಡ್-19 ವೈರಸ್‌ನ್ನು ಸಶಕ್ತವಾಗಿ ನಿಭಾಯಿಸಿದ ಶೈಲಜಾ ಅವರ ಸಹಿತ ಎಲ್ಲ ನಾಯಕರುಗಳನ್ನು ಶ್ಲಾಘಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಶೈಲಜಾ, "ಕೇರಳದಲ್ಲಿ ಕಾಣಿಸಿಕೊಂಡ ನಿಪಾಹ್ ವೈರಸ್ ಹಾಗೂ 2018, 2019ರಲ್ಲಿ ರಾಜ್ಯದಲ್ಲಿ ಸಂಭವಿಸಿರುವ ಎರಡು ಜಲ ಪ್ರವಾಹದ ಬಳಿಕ ಉಂಟಾದ ಪರಿಸ್ಥಿತಿಯನ್ನು ನಿಭಾಯಿಸಿರುವ ಅನುಭವ ನಮಗೆ ನೆರವಾಯಿತು. ಜಲ ಪ್ರವಾಹದ ವೇಳೆಯೂ ಆರೋಗ್ಯ ವಲಯ ನಿರ್ಣಾಯಕ ಪಾತ್ರವಹಿಸಿದ್ದವು. ಇವೆಲ್ಲವೂ ಕೋವಿಡ್-19 ನಿಭಾಯಿಸಲು ನೆರವಾದವು. ವುಹಾನ್‌ನಲ್ಲಿ ಕೊರೋನ ವೈರಸ್ ಪ್ರಕರಣ ವರದಿಯಾದ ಬಂದ ತಕ್ಷಣ ಕೇರಳವು ಡಬ್ಲ್ಯುಎಚ್‌ಒ ಹಾಗೂ ಪ್ರತಿ ಕಾರ್ಯಾಚರಣ ಶಿಷ್ಟಾಚಾರಗಳು ಹಾಗೂ ಅಂತರ್‌ರಾಷ್ಟ್ರೀಯ ನಿಯಮವನ್ನು ಪಾಲಿಸುತ್ತಾ ಬಂದಿತ್ತು. ಕೊರೋನ ಹರಡುವಿಕೆ ಪ್ರಮಾಣವನ್ನು 12.5 ಶೇ. ಹಾಗೂ ಸಾವಿನ ಸಂಖ್ಯೆ 0.6 ಶೇ.ಕ್ಕಿಂತ ಕೆಳಗೆ ನಿಯಂತ್ರಿಸಲು ಸಫಲವಾಗಿದ್ದೇವೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News