ಭಾರತೀಯ ಅಮೆರಿಕನ್ನರ ‘ಭಾರೀ ಬೆಂಬಲ’ಕ್ಕೆ ಟ್ರಂಪ್ ಕೃತಜ್ಞ: ಶ್ವೇತಭವನ

Update: 2020-06-27 17:12 GMT

ವಾಶಿಂಗ್ಟನ್, ಜೂ. 27: ಭಾರತೀಯರು ಮತ್ತು ಭಾರತೀಯ-ಅಮೆರಿಕನ್ನರು ವ್ಯಕ್ತಪಡಿಸಿರುವ ಭಾರೀ ಬೆಂಬಲಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೃತಜ್ಞರಾಗಿದ್ದಾರೆ ಎಂದು ಶ್ವೇತಭವನ ಹೇಳಿದೆ. ಜಿದ್ದಾಜಿದ್ದಿನ ಸ್ಪರ್ಧೆಯಿರುವ ಹಲವಾರು ಅಮೆರಿಕದ ರಾಜ್ಯಗಳಲ್ಲಿ ಭಾರತೀಯ ಅಮೆರಿಕನ್ ಸಮುದಾಯ 50 ಶೇಕಡಕ್ಕೂ ಅಧಿಕ ಸದಸ್ಯರು ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಟ್ರಂಪ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬ ಸಮೀಕ್ಷೆಯೊಂದಕ್ಕೆ ಶ್ವೇತಭವನವು ಈ ರೀತಿಯಾಗಿ ಪ್ರತಿಕ್ರಿಯಿಸಿದೆ.

ಸಾಂಪ್ರದಾಯಿಕವಾಗಿ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರಾಗಿರುವ ಭಾರತೀಯ ಸಮುದಾಯದ ಸದಸ್ಯರು ನವೆಂಬರ್ 3ರಂದು ನಡೆಯಲಿರುವ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಟ್ರಂಪ್‌ಗೆ ಮತಹಾಕಲು ನಿರ್ಧರಿಸಿದ್ದಾರೆ ಎಂಬ ಸಮೀಕ್ಷಾ ವರದಿಯ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಮ್ಯಾಥ್ಯೂಸ್ ಈ ರೀತಿಯಾಗಿ ಉತ್ತರಿಸಿದ್ದಾರೆ.

ಜಿದ್ದಾಜಿದ್ದಿನ ಸ್ಪರ್ಧೆಯಿರುವ ರಾಜ್ಯಗಳಾದ ಮಿಶಿಗನ್, ಫ್ರೋಟೆಕ್ಸಾಸ್, ಪೆನ್ಸಿಲ್ವೇನಿಯ ಮತ್ತು ವರ್ಜೀನಿಯಗಳಲ್ಲಿ 50 ಶೇಕಡಕ್ಕೂ ಅಧಿಕ ಭಾರತೀಯ ಅಮೆರಿಕನ್ನರು ಡೊನಾಲ್ಡ್ ಟ್ರಂಪ್‌ಗೆ ನಿಷ್ಠೆ ಬದಲಾಯಿಸಿದ್ದಾರೆ ಎಂದು ‘ಟ್ರಂಪ್ ವಿಕ್ಟರಿ ಇಂಡಿಯನ್-ಅಮೆರಿಕನ್ ಫೈನಾನ್ಸ್ ಕಮಿಟಿ’ಯ ನಡೆಸಿದ ಸಮೀಕ್ಷೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News