ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೈನಿಕರನ್ನು ಕೊಲ್ಲಲು ರಶ್ಯ ಉಗ್ರರಿಗೆ ಬಹುಮಾನ ನೀಡಿತ್ತು

Update: 2020-06-27 17:18 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್, ಜೂ. 27: ಅಮೆರಿಕ ಮತ್ತು ಇತರ ಮಿತ್ರದೇಶಗಳ ಸೈನಿಕರನ್ನು ಕೊಲ್ಲಲು ತಾಲಿಬಾನ್‌ನೊಂದಿಗೆ ನಂಟು ಹೊಂದಿರುವ ಅಫ್ಘಾನಿಸ್ತಾನದ ಭಯೋತ್ಪಾದಕರಿಗೆ ರಶ್ಯ ಬಹುಮಾನಗಳನ್ನು ನೀಡಿತ್ತು ಎಂಬ ನಿರ್ಧಾರಕ್ಕೆ ಅಮೆರಿಕದ ಗುಪ್ತಚರ ಇಲಾಖೆ ಬಂದಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಶುಕ್ರವಾರ ವರದಿ ಮಾಡಿದೆ.

ಯುರೋಪ್‌ನಲ್ಲಿ ನಾಯಕರನ್ನು ಕೊಲ್ಲಲು ನಡೆದಿರುವ ಪ್ರಯತ್ನಗಳೊಂದಿಗೆ ನಂಟು ಹೊಂದಿರುವ ರಶ್ಯದ ಸೇನಾ ಗುಪ್ತಚರ ಘಟಕವೊಂದು, ಅಮೆರಿಕ ಮತ್ತು ಮಿತ್ರ ದೇಶಗಳ ಸೈನಿಕರ ಮೇಲೆ ನಡೆಯುವ ಯಶಸ್ವಿ ದಾಳಿಗಳಿಗೆ ಪುರಸ್ಕಾರ ನೀಡುವ ಭರವಸೆಯನ್ನು ಕಳೆದ ವರ್ಷ ನೀಡಿತ್ತು ಎಂಬ ನಿರ್ಧಾರಕ್ಕೆ ಅಮೆರಿಕ ತಿಂಗಳುಗಳ ಹಿಂದೆಯೇ ಬಂದಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ತಾಲಿಬಾನ್ ಭಯೋತ್ಪಾದಕರು ಹಾಗೂ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಶಸ್ತ್ರಸಜ್ಜಿತ ಕ್ರಿಮಿನಲ್‌ಗಳು ಈ ರೀತಿಯಾಗಿ ಬಹುಮಾನದ ಹಣವನ್ನು ಸ್ವೀಕರಿಸಿದ್ದಾರೆ ಎಂದು ಭಾವಿಸಲಾಗಿದೆ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News