ವಿದೇಶಿ ಮಹಿಳೆಯ ಮಗ ದೇಶಭಕ್ತನಾಗಲು ಸಾಧ್ಯವಿಲ್ಲ: ರಾಹುಲ್ ಗಾಂಧಿ ವಿರುದ್ಧ ಪ್ರಜ್ಞಾ ಠಾಕೂರ್ ವಾಗ್ದಾಳಿ
Update: 2020-06-29 13:06 IST
ಹೊಸದಿಲ್ಲಿ, ಜೂ.29: ವಿದೇಶಿ ಮಹಿಳೆಯ ಮಗ ದೇಶಭಕ್ತನಾಗಲು ಸಾಧ್ಯವಿಲ್ಲ ಎಂದು ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವೈಯಕ್ತಿಕವಾಗಿ ವಾಗ್ದಾಳಿ ನಡೆಸಿದ್ದಾರೆ.
"ವಿದೇಶಿ ಮಹಿಳೆಯ ಗರ್ಭದಲ್ಲಿ ಜನಿಸಿರುವ ವ್ಯಕ್ತಿ ರಾಷ್ಟ್ರ ಭಕ್ತನಾಗಲು ಸಾಧ್ಯವಿಲ್ಲ.ಮಣ್ಣಿನ ಮಗ ಮಾತ್ರ ತಾಯ್ನಿಡನ್ನು ರಕ್ಷಿಸುತ್ತಾನೆ ಎಂದು ಚಾಣಕ್ಯ ಹೇಳಿದ್ದಾನೆ'' ಎಂದು ಪ್ರಜ್ಞಾ ಸಿಂಗ್ ಮತ್ತೊಮ್ಮೆ ತನ್ನ ನಾಲಗೆಯನ್ನು ಹರಿಬಿಟ್ಟಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಅವರ ದೇಶಭಕ್ತಿಯನ್ನು ಪ್ರಶ್ನಿಸಿದ ಪ್ರಜ್ಞಾ ಸಿಂಗ್, "ಎರಡು ದೇಶಗಳಲ್ಲಿ ಪೌರತ್ವ ಹೊಂದಿರುವವರಿಂದ ದೇಶಭಕ್ತಿ ನಿರೀಕ್ಷಿಸಲು ಸಾಧ್ಯವಿಲ್ಲ'' ಎಂದು ಹೇಳಿದ್ದಾರೆ.
ಈ ಹಿಂದೆ ಮಹಾತ್ಮ ಗಾಂಧಿಯ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುವ ಮೂಲಕ ಪ್ರಜ್ಞಾ ಸಿಂಗ್ ವಿವಾದಕ್ಕೆ ಸಿಲುಕಿದ್ದರು.