ದೋಣಿ ಮುಳುಗಿ 23 ಮಂದಿ ಸಾವು

Update: 2020-06-29 16:53 GMT

ಢಾಕಾ (ಬಾಂಗ್ಲಾದೇಶ), ಜೂ. 29: ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಸೋಮವಾರ ದೋಣಿಯೊಂದು ಇನ್ನೊಂದು ದೋಣಿಗೆ ಢಿಕ್ಕಿಯಾಗಿ ಮಗುಚಿದಾಗ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ ಹಾಗೂ ಡಝನ್‌ಗಟ್ಟಳೆ ಜನರು ನಾಪತ್ತೆಯಾಗಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

 ‘‘ನಾವು ಈವರೆಗೆ ಮುಳುಗಿದ ದೋಣಿಯಿಂದ 23 ಮೃತದೇಹಗಳನ್ನು ಹೊರತೆಗೆದಿದ್ದೇವೆ’’ ಎಂದು ಅಗ್ನಿಶಾಮಕ ಅಧಿಕಾರಿ ಇನಾಯತ್ ಹುಸೈನ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

‘‘ದೋಣಿಯಲ್ಲಿ ಸುಮಾರು 50 ಮಂದಿ ಇದ್ದರು. ನಮ್ಮ ಮುಳುಗುಗಾರರು ಶೋಧ ಕಾರ್ಯ ಮುಂದುವರಿಸಿದ್ದಾರೆ’’ ಎಂದು ಅವರು ಹೇಳಿದರು.

ದೇಶದ ಅತಿ ದೊಡ್ಡ ನದಿ ಬಂದರು ಸದರ್‌ಘಾಟ್‌ನಿಂದ ಕೆಲವೇ ಮೀಟರ್‌ಗಳಷ್ಟು ದೂರದಲ್ಲಿರುವ ಫರಾಶ್‌ಗಂಜ್‌ನಲ್ಲಿ ‘ಮಾರ್ನಿಂಗ್ ಬರ್ಡ್’ ಎಂಬ ದೋಣಿಯು ಇನ್ನೊಂದು ದೋಣಿಗೆ ಢಿಕ್ಕಿಯಾಗಿ ಮುಳುಗಿತು.

ದೋಣಿಯಲ್ಲಿದ್ದವರ ಪೈಕಿ ಹಲವರು ಕ್ಯಾಬಿನ್‌ಗಳಲ್ಲಿದ್ದರು ಎಂದು ಸ್ಥಳೀಯರು ಸ್ಥಳೀಯ ಸುದ್ದಿವಾಹಿನಿಗಳಿಗೆ ತಿಳಿಸಿದ್ದಾರೆ.

ಬಾಂಗ್ಲಾದೇಶದ ದೋಣಿಗಳು ಯಾವಾಗಲೂ ಜನರಿಂದ ತುಂಬಿತುಳುಕುತ್ತಿದ್ದು, ಅಲ್ಲಿ ಅಪಘಾತಗಳು ಸಾಮಾನ್ಯವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News