ಬಸ್ ಸಿಗದೆ ಕಂಗಾಲಾಗಿದ್ದ ಬಾಲಕಿಯನ್ನು ಠಾಣೆಗೆ ಕರೆತಂದು 2 ತಿಂಗಳು ಅತ್ಯಾಚಾರಗೈದ ಪೊಲೀಸರು: ಆರೋಪ

Update: 2020-06-29 18:25 GMT

ಹೊಸದಿಲ್ಲಿ: 13 ವರ್ಷದ ಬಾಲಕಿಯೊಬ್ಬಳ ಅತ್ಯಾಚಾರ ಮತ್ತು ಗರ್ಭಪಾತ ಆರೋಪದಲ್ಲಿ ಒಡಿಶಾದ ಸುಂದರ್ ಗರ್ ಜಿಲ್ಲೆಯ ಪೊಲೀಸ್ ಇನ್ ಸ್ಪೆಕ್ಟರ್ ಒಬ್ಬರನ್ನು ವಜಾಗೊಳಿಸಲಾಗಿದೆ ಎಂದು hindustantimes.com ವರದಿ ಮಾಡಿದೆ.

ಜಾತ್ರೆಯೊಂದಕ್ಕೆ ಮಾರ್ಚ್ 25ರಂದು ಆಗಮಿಸಿದ್ದ ಬಾಲಕಿ ಲಾಕ್ ಡೌನ್ ಕಾರಣ ಕೊನೆಯ ಕ್ಷಣದಲ್ಲಿ ಜಾತ್ರೆ ರದ್ದಾದ ಕಾರಣ ಮನೆಗೆ ಹೋಗಲು ಬಸ್ ಸಿಗದೆ ಬಸ್ ನಿಲ್ದಾಣದಲ್ಲಿ ತಿರುಗುತ್ತಿದ್ದಳು. ಗಸ್ತು ತಿರುಗುತ್ತಿದ್ದ ಪೊಲೀಸರು ಆಕೆಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದರು.

ಠಾಣೆಯ ಇನ್ ಸ್ಪೆಕ್ಟರ್ ಆನಂದ್ ಚಂದ್ರ ಮಝಿ, ಬಾಲಕಿಯ ಮೇಲೆ ಪೊಲೀಸ್ ಠಾಣೆಯಲ್ಲೇ ಅತ್ಯಾಚಾರಗೈದಿದ್ದ ಎಂದು ಆರೋಪಿಸಲಾಗಿದೆ. ನಂತರ ಬಾಲಕಿಯನ್ನು ಮನೆಗೆ ಬಿಡಲಾಗಿತ್ತು. ಇದಾದ ನಂತರ ಬಾಲಕಿಯನ್ನು ಮತ್ತೆ ಮತ್ತೆ ಠಾಣೆಗೆ ಕರೆಸಿ ಇನ್ ಸ್ಪೆಕ್ಟರ್ ಮತ್ತಿತರ ಪೊಲೀಸರು ನಿರಂತರ 2 ತಿಂಗಳುಗಳ ಕಾಲ ಅತ್ಯಾಚಾರಗೈದಿದ್ದರು. ಕೊನೆಗೆ ಬಾಲಕಿ ಗರ್ಭಿಣಿಯಾಗಿದ್ದು, ಆಕೆಯ ಗರ್ಭಪಾತ ನಡೆಸಲು ಮಝಿ ಯತ್ನಿಸಿದ್ದ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ಎಸ್. ಜೆನಾ ಅವರಿಗೆ ಮಾಹಿತಿ ಲಭಿಸಿ ಅವರು ರೈಬೋಗ ಪೊಲೀಸ್ ಠಾಣೆಯಲ್ಲಿ ಮಝಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇತರ ಪೊಲೀಸ್ ಸಿಬ್ಬಂದಿ, ಬಾಲಕಿಯ ಗರ್ಭಪಾತ ನಡೆಸಿದ ವೈದ್ಯ, ಬಾಲಕಿಯ ಮಲತಂದೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿ ಆನಂದ್ ಚಂದ್ರ ಮಝಿಯನ್ನು ವಜಾಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News