ವಿದೇಶಿ ಹೂಡಿಕೆದಾರರ ಹಕ್ಕನ್ನು ಭಾರತ ಗೌರವಿಸಬೇಕು: ಆ್ಯಪ್‌ಗಳ ನಿಷೇಧಕ್ಕೆ ಚೀನಾ ಪ್ರತಿಕ್ರಿಯೆ

Update: 2020-06-30 18:14 GMT

ಹೊಸದಿಲ್ಲಿ, ಜೂ.30: ಚೀನಾದ ಆ್ಯಪ್‌ಗಳ ಮೇಲೆ ನಿಷೇಧ ವಿಧಿಸಿರುವ ಭಾರತದ ಉಪಕ್ರಮ ಅತ್ಯಂತ ಕಳವಳಕಾರಿಯಾಗಿದ್ದು, ಚೀನಾ ಸಹಿತ ಅಂತರಾಷ್ಟ್ರೀಯ ಹೂಡಿಕೆದಾರರ ಕಾನೂನುಬದ್ಧ ಹಕ್ಕನ್ನು ಗೌರವಿಸುವ ಮತ್ತು ಎತ್ತಿಹಿಡಿಯುವ ಜವಾಬ್ದಾರಿ ಭಾರತದ್ದಾಗಿದೆ ಎಂದು ಚೀನಾ ಹೇಳಿದೆ.

 ಚೀನಾದ 59 ಆ್ಯಪ್‌ಗಳ ಮೇಲೆ ಭಾರತ ನಿಷೇಧ ವಿಧಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶ ವ್ಯವಹಾರ ಇಲಾಖೆ ವಕ್ತಾರ ಜಾವೊ ಲಿಜಿಯಾನ್, ಭಾರತದ ಈ ನಡೆ ದುರದೃಷ್ಟಕರವಾಗಿದ್ದು, ಪರಿಸ್ಥಿತಿಯನ್ನು ಪರಾಮರ್ಶಿಸಲಾಗುತ್ತಿದೆ. ಯಾವತ್ತೂ ಅಂತರಾಷ್ಟ್ರೀಯ ಮತ್ತು ಸ್ಥಳೀಯ ಕಾನೂನು ಮತ್ತು ನಿಯಮಗಳಿಗೆ ಬದ್ಧವಾಗಿರುವಂತೆ ಚೀನಾದ ಸಂಸ್ಥೆಗಳಿಗೆ ಚೀನಾದ ಸರಕಾರ ಸ್ಪಷ್ಟವಾಗಿ ತಿಳಿಸಿದೆ. ಯಾವುದೇ ಕಾರಣಕ್ಕೂ ಸ್ಥಳೀಯ ನಿಯಮವನ್ನು ಉಲ್ಲಂಘಿಸುವ ಪ್ರಶ್ನೆಯೇ ಇಲ್ಲ. ಚೀನಾ ಸಹಿತ ಅಂತರಾಷ್ಟ್ರೀಯ ಹೂಡಿಕೆದಾರರ ಕಾನೂನುಬದ್ಧ ಹಕ್ಕನ್ನು ಎತ್ತಿಹಿಡಿಯುವ ಜವಾಬ್ದಾರಿ ಭಾರತ ಸರಕಾರದ್ದಾಗಿದೆ ಎಂದು ಹೇಳಿದ್ದಾರೆ.

ಇಂತಹ ಆಕ್ರಮಣಕಾರಿ ಉಪಕ್ರಮಗಳಿಂದ ಸಮಸ್ಯೆ ಇನ್ನಷ್ಟು ಕಗ್ಗಂಟಾಗಲಿದೆ. ಆದ್ದರಿಂದ ಭಾರತ ಸರಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು. ಸೋಮವಾರ ಟಿಕ್‌ಟಾಕ್ ಸೇರಿದಂತೆ ಚೀನಾದ 59 ಆ್ಯಪ್‌ಗಳನ್ನು ಭಾರತ ನಿಷೇಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News