ಉಗ್ರರ ದಾಳಿ: ಅಜ್ಜನ ರಕ್ತಸಿಕ್ತ ಮೃತದೇಹದ ಬಳಿ ಕುಳಿತು ಕಣ್ಣೀರಿಡುತ್ತಿರುವ 3 ವರ್ಷದ ಮಗು

Update: 2020-07-01 08:20 GMT

ಜಮ್ಮು: ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದಾಗ ನಡೆದ ಗುಂಡಿನ ಚಕಮಕಿಯಲ್ಲಿ ನಾಗರಿಕರೊಬ್ಬರು ಮೃತಪಟ್ಟಿದ್ದು, ಅವರ ಮೃತದೇಹದ ಬಳಿ 3 ವರ್ಷದ ಮೊಮ್ಮಗ ಕುಳಿತಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಸಿಆರ್ ಪಿಎಫ್ ಯೋಧರೊಬ್ಬರು ಮೃತಪಟ್ಟಿದ್ದಾರೆ.

ಗುಂಡಿನ ಚಕಮಕಿ ನಡೆಯುತ್ತಿದ್ದಾಗ ನಾಗರಿಕರೊಬ್ಬರು ಗುಂಡೇಟಿನಿಂದ ಮೃತಪಟ್ಟಿದ್ದರು. ಅವರ ರಕ್ತಸಿಕ್ತ ಮೃತದೇಹದ ಹತ್ತಿರ ಕುಳಿತಿರುವ ಅವರ ಮೊಮ್ಮಗ ಕಣ್ಣೀರಿಡುತ್ತಿರುವ ಫೋಟೊ ಇದಾಗಿದೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಗುವನ್ನು ಸುರಕ್ಷಿತವಾಗಿ ಕರೆದೊಯ್ದಿದ್ದಾರೆ. ಮಗುವನ್ನು ಸಮಾಧಾನಪಡಿಸಿ ಕರೆದೊಯ್ಯುತ್ತಿರುವ ಫೋಟೊವನ್ನು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.

“ಸೋಪೋರ್ ನಲ್ಲಿ ಉಗ್ರರಿಂದ ದಾಳಿ ನಡೆದಾಗ ಗುಂಡೇಟಿನಿಂದ 3 ವರ್ಷದ ಮಗುವನ್ನು ಪೊಲೀಸರು ರಕ್ಷಿಸಿದ್ದಾರೆ” ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.

ತನ್ನ ಅಜ್ಜನ ಜೊತೆ 3 ವರ್ಷದ ಮೊಮ್ಮಗ ಕಾರಿನಲ್ಲಿ ಹೊರಟಿದ್ದ. ಶ್ರೀನಗರದಿಂದ ಹಂದ್ವಾರಕ್ಕೆ ಹೋಗುತ್ತಿದ್ದಾಗ ಸೋಪೋರ್ ನಲ್ಲಿ ಗುಂಡಿನ ದಾಳಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News