ಕೇಂದ್ರ ಪೂರೈಕೆ ಮಾಡಿದ್ದ 175 ವೆಂಟಿಲೇಟರ್ ಗಳಲ್ಲಿ ಅಗತ್ಯ ತಂತ್ರಜ್ಞಾನವಿಲ್ಲ: ಲೋಕ್ ನಾಯಕ್ ಆಸ್ಪತ್ರೆ ಆರೋಪ

Update: 2020-07-01 12:58 GMT

ಹೊಸದಿಲ್ಲಿ: ಕೇಂದ್ರ ಸರಕಾರ ಪೂರೈಕೆ ಮಾಡಿದ 175 ವೆಂಟಿಲೇಟರ್ ‍ಗಳು ಅತಿ ಮುಖ್ಯ ಅಂಶವೊಂದನ್ನು ಹೊಂದಿಲ್ಲ ಎಂದು ದಿಲ್ಲಿಯ ಪ್ರಮುಖ ಕೋವಿಡ್ ಆಸ್ಪತ್ರೆಯಾಗಿರುವ ಲೋಕ್ ನಾಯಕ್ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯ ಅಧಿಕಾರಿಗಳು  ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯಕ್ಕೆ ದೂರಿದ್ದಾರೆ.

ಈ ವೆಂಟಿಲೇಟರ್ ಗಳಲ್ಲಿ ಅತೀ ಅಗತ್ಯವಾದ ಬಿಲೆವೆಲ್ ಪಾಸಿಟಿವ್ ಏರ್‍ ವೇ ಪ್ರೆಶರ್ ಅಥವಾ ಬೈಪಿಎಪಿ ಮೋಡ್ ಇಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ. ಈ ಮೋಡ್ ಮುಖಾಂತರ ವೈದ್ಯರು ರೋಗಿಗಳ ಮೂಗಿಗೆ ಟ್ಯೂಬ್ ಅಳವಡಿಸದೆ   ಆಮ್ಲಜನಕ ಪೂರೈಕೆ ಮಾಡಬಹುದಾಗಿದೆ. ಈ ಬೈಪಿಎಪಿ ಮೋಡ್ ಹೊಂದಿದ ಇನ್ನೂ 250 ಹೆಚ್ಚು ವೆಂಟಿಲೇಟರ್‍ ಗಳನ್ನು ಒದಗಿಸುವಂತೆಯೂ ಆಸ್ಪತ್ರೆ ಸರಕಾರಕ್ಕೆ ಮನವಿ ಮಾಡಿದೆ.

ಈಗ ಹೆಚ್ಚಿನ ರೋಗಿಗಳಿಗೆ ಟ್ಯೂಬ್ ಅಳವಡಿಸಿ ಆಮ್ಲಜನಕ ನೀಡಲಾಗುವುದಿಲ್ಲ ಹಾಗೂ ಶೇ.10ರಿಂದ ಶೇ. 15ರಷ್ಟು ರೋಗಿಗಳಿಗೆ ಮಾತ್ರ ಇದನ್ನು ಬಳಸಬಹುದಾದುದರಿಂದ ಅವುಗಳು ಹೆಚ್ಚು ಪ್ರಯೋಜನಕಾರಿಯಲ್ಲ ಎಂದು ಅಲ್ಲಿನ ವೈದ್ಯರು ಹೇಳುತ್ತಿದ್ದಾರೆ.

ಈ ವೆಂಟಿಲೇಟರ್ ‍ಗಳಲ್ಲಿ ಕೆಲವು ಮಾರ್ಪಾಟುಗಳನ್ನು ಹೇಗೆ ಮಾಡಬಹುದು ಎಂದು ಚರ್ಚಿಸಲು ಆಸ್ಪತ್ರೆ ಒಂದು ಸಮಿತಿ ರಚಿಸಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುರೇಶ್ ಕುಮಾರ್ ಹೇಳಿದ್ದಾರೆ.

ಆದರೆ ಈ ಆರೋಪಗಳನ್ನು ನಿರಾಕರಿಸಿರುವ ಆರೋಗ್ಯ ಸಚಿವಾಲಯ, ಮೇಡ್ ಇನ್ ಇಂಡಿಯಾ ವೆಂಟಿಲೇಟರ್ ಗಳು ಅಗತ್ಯ ತಂತ್ರಜ್ಞಾನವನ್ನು ಹೊಂದಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News