ಕೋವಿಡ್-19 ಔಷಧಿ ರೆಮಿಡೆಸಿವಿರ್‌ನ ಡೋಸೆಜ್ ಅವಧಿ 5 ದಿನಗಳಿಗೆ ಇಳಿಕೆ

Update: 2020-07-04 16:39 GMT

ಹೊಸದಿಲ್ಲಿ,ಜು.5: ಕೋವಿಡ್-19 ರೋಗಿಗಳು, ವೈರಾಣು ನಿರೋಧಕ ಔಷಧಿ ರೆಮಿಡಿಸಿವಿರ್‌ನ ಡೋಸೆಜ್ ಅವಧಿಯನ್ನು ಆರು ದಿನಗಳಿಂದ ಐದು ದಿನಗಳಿಗೆ ಇಳಿಸಿದೆ.

ರೋಗಿಗಳಿಗೆ ರೆಮಿಡೆಸಿವಿರ್ ಲಸಿಕೆಯನ್ನು ಮೊದಲನೆ ದಿನದಂದು 200 ಮಿ.ಗ್ರಾಂ. ಹಾಗೂ ಆನಂತರದ ನಾಲ್ಕು ದಿನಗಳಿಗೆ ದಿನಕ್ಕೆ 100 ಮಿ.ಗ್ರಾಂ.ನಂತೆ ನೀಡಬೇಕಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ. ಸೌಮ್ಯವಾದ ಕೊರೋನ ವೈರಸ್ ಸೋಂಕಿನ ಪ್ರಕರಣಗಳಲ್ಲಿ ರೆಮಿಡೆಸಿವಿರ್ ಔಷಧಿಯನ್ನು ‘ಕೆಲವು ನಿರ್ಬಂಧಗಳೊಂದಿಗೆ ತುರ್ತು ಬಳಕೆ ಮಾಡಬಹುದು’ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

 ಕೊರೋನ ವೈರಸ್ ರೋಗಿಗಳ ಚಿಕಿತ್ಸೆಗಾಗಿ ರೆಮಿಡೆಸಿವಿರ್ ಲಸಿಕೆಯನ್ನು ತಯಾರಿಸಲು ಹೈದರಾಬಾದ್ ಮೂಲದ ಔಷಧಿ ತಯಾರಕ ಸಂಸ್ಥೆ ಹೆಟೊರೊಗೆ ಕೇಂದ್ರ ಸರಕಾರ ಅನುಮತಿ ನೀಡಿತ್ತು. ಈ ಔಷಧಿಯ ಮೊದಲ ಕಂತನ್ನು ಮಹಾರಾಷ್ಟ್ರ, ದಿಲ್ಲಿ, ತಮಿಳುನಾಡು, ಗುಜರಾತ್ ರಾಜ್ಯಳಿಗೆ ಪ್ರತಿ ಸೀಸೆಗೆ 5400 ರೂ. ನಿಗದಿಪಡಿಸಲಾಗಿದೆ ಎಂದು ಕಂಪೆನಿಯು ತಿಳಿಸಿದೆ.

 ಕೊರೋನ ವೈರಸ್ ಸೋಕಿನ ಚಿಕಿತ್ಸೆಗೆ ರೆಮಿಡೆಸಿವಿರ್ ಪರಿಣಾಮಕಾರಿಯೆಂದು ಈಗಾಗಲೇ ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಸಾಬೀತಾಗಿದೆ. ಅಮೆರಿಕದ ಬಯೋಫಾರ್ಮಾಸ್ಯೂಟಿಕಲ್ ಸಂಸ್ಥೆ ಗಿಲಿಯಾಡ್ ಸಯನ್ಸಸ್ ಈ ಔಷಧಿಯನ್ನು ಅಭಿವೃದ್ಧಿಪಡಿಸಿದೆ.

ದಕ್ಷಿಣ ಕೊರಿಯ, ಜಪಾನ್ ಹಾಗೂ ಅಮೆರಿಕ ದೇಶಗಳು ತುರ್ತು ಸನ್ನಿವೇಶಗಳಲ್ಲಿ ಈ ಔಷಧಿಯನ್ನು ಬಳಸಲು ಅನುಮತಿ ನೀಡಿದೆ. ಆದಾಗ್ಯೂ, ಮೂತ್ರಪಿಂಡದ ತೊಂದರೆ ಇರುವವರು, ಗರ್ಭಿಣಿಯರು ಹಾಗೂ ಶಿಶುಗಳಿಗೆ ಹಾಲುಣಿಸುವ ತಾಯಂದಿರು ಹಾಗೂ 12 ವರ್ಷದೊಳಗಿನ ಮಕ್ಕಳಿಗೆ ಈ ಔಷಧಿಯನ್ನು ಶಿಫಾರಸು ಮಾಡಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News