ರಾಮೊಸ್ ಗೋಲು : ಮ್ಯಾಡ್ರಿಡ್‌ಗೆ ಜಯ

Update: 2020-07-05 18:31 GMT

  ಮ್ಯಾಡ್ರಿಡ್ , ಜು.5: ಸತತ ಎರಡನೇ ಪಂದ್ಯದಲ್ಲೂ ನಾಯಕ ಸೆರ್ಗಿಯೊ ರಾಮೊಸ್ ಪೆನಾಲ್ಟಿ ಗೋಲು ಗಳಿಸಿ ಲಾ ಲಿಗಾ ಪಂದ್ಯದಲ್ಲಿ ರಿಯಲ್ ಮ್ಯಾಡ್ರಿಡ್ ತಂಡದ ಗೆಲುವಿಗೆ ನೆರವಾದರು.

  ರವಿವಾರ ನಡೆದ ಪಂದ್ಯದಲ್ಲಿ ಅಥ್ಲೆಟಿಕ್ ಬಿಲ್ಬಾವೊ ತಂಡವನ್ನು 1-0 ಅಂತರದಲ್ಲಿ ಸೋಲಿಸಿದ ರಿಯಲ್ ಮ್ಯಾಡ್ರಿಡ್ ಲಾ ಲಿಗಾದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.

   ಗೆಟಾಫೆ ವಿರುದ್ಧ ಗುರುವಾರ ಪೆನಾಲ್ಟಿ ಗೋಲು ಜಮೆ ಮಾಡಿದ್ದ ರಾಮೊಸ್ ಇಂದಿನ ಪಂದ್ಯದಲ್ಲೂ ಅದೇ ಪ್ರದರ್ಶನ ಮುಂದುವರಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು. ಈ ಗೆಲುವಿನೊಂದಿಗೆ ಮ್ಯಾಡ್ರಿಡ್ ಎದುರಾಳಿ ಬಾರ್ಸಿಲೋನಕ್ಕಿಂತ 7 ಗೋಲುಗಳ ಮುನ್ನಡೆ ಸಾಧಿಸಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.

   ಕೋವಿಡ್ -19 ಕಾರಣದಿಂದಾಗಿ ಸ್ಥಗಿತಗೊಂಡು ಮತ್ತೆ ಲೀಗ್ ಟೂರ್ನಿ ಪುನರಾರಂಭದ ನಂತರ ಏಳು ಪಂದ್ಯಗಳಲ್ಲಿ ಐದು ಗೋಲುಗಳನ್ನು ಜಮೆ ಮಾಡಿದ್ದಾರೆ. ಅವರು ಗೋಲು ಗಳಿಸಿದ ಎಲ್ಲ ಪಂದ್ಯಗಳಲ್ಲಿ ಮ್ಯಾಡ್ರಿಡ್ ಗೆಲುವಿನ ದಡ ಸೇರಿದೆ. ಇದು ಅವರ 22ನೇ ಪೆನಾಲ್ಟಿ ಗೋಲು ಆಗಿದೆ.

1994-95 ರಲ್ಲಿ ಫ್ರಾನ್ಸಿಸ್ಕೊ ಬೈಯೊ ನಂತರ ಒಂದೇ ಲಾ ಲಿಗಾ ಟೂರ್ನಿಯಲ್ಲಿ ರಿಯಲ್ ಮ್ಯಾಡ್ರಿಡ್ ಪರ 17 ಕ್ಲೀನ್ ಚಿಟ್‌ಗಳನ್ನು ಪಡೆದ ಗೋಲ್ ಕೀಪರ್ ಎಂಬ ಹೆಗ್ಗಳಿಕೆಗೆ ಕೋರ್ಟೊಯಿಸ್ ಪಾತ್ರರಾದರು.

2012ರಿಂದ ಎರಡನೇ ಲಾ ಲಿಗಾ ಪ್ರಶಸ್ತಿಯನ್ನು ಬಾಚಿಕೊಳ್ಳಲು ಝೈನುದ್ದೀನ್ ಜಿದಾನೆ ಅವರ ತಂಡವು ಇನ್ನು ಉಳಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಮಾತ್ರ ಗೆಲ್ಲಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News