ಯುಪಿಎಸ್ಸಿ ಕಂಬೈನ್ಡ್ ಮೆಡಿಕಲ್ ಸರ್ವಿಸಸ್ ಪರೀಕ್ಷೆ: ಜುಲೈ 21ರಿಂದ ಸಂದರ್ಶನ ಆರಂಭ

Update: 2020-07-09 17:40 GMT

ಯುಪಿಎಸ್ಸಿ ಕಂಬೈನ್ಡ್ ಮೆಡಿಕಲ್ ಸರ್ವಿಸಸ್ ಪರೀಕ್ಷೆ: ಜುಲೈ 21ರಿಂದ ಸಂದರ್ಶನ ಆರಂಭ

ಹೊಸದಿಲ್ಲಿ, ಜು.9: 2019ರ ಸಾಲಿನ ಕಂಬೈನ್ಡ್ ಮೆಡಿಕಲ್ ಸರ್ವಿಸಸ್ (ಸಂಯೋಜಿತ ವೈದ್ಯಕೀಯ ಸೇವೆ) ಪರೀಕ್ಷೆಯ ಸಂದರ್ಶನ ಸುತ್ತು ಜುಲೈ 21ರಿಂದ ಆಗಸ್ಟ್ 4ರವರೆಗೆ ನಡೆಯಲಿದೆ ಎಂದು ಯುಪಿಎಸ್ಸಿಯ ಅಧಿಸೂಚನೆ ತಿಳಿಸಿದೆ.

ವೈದ್ಯಕೀಯ ಸೇವೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಈ ಪ್ರಕ್ರಿಯೆಯಲ್ಲಿ 2019ರ ಎಪ್ರಿಲ್ 10ರಂದು ಲಿಖಿತ ಪರೀಕ್ಷೆ ನಡೆದಿದ್ದು ಇದರಲ್ಲಿ ಯಶಸ್ವಿಯಾದ 642 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಶಾರ್ಟ್ಲಿಸ್ಟ್ ಮಾಡಲಾಗಿದೆ.

ತಾವು ಪಡೆದಿರುವ ಅಂಕಗಳನ್ನು ಯುಪಿಎಸ್ಸಿಯ ಪಬ್ಲಿಕ್ ಪೋರ್ಟಲ್ ನಲ್ಲಿ ಪ್ರದರ್ಶಿಸಬೇಕೇ ಎಂಬ ಆಯ್ಕೆಯನ್ನು ಅಭ್ಯರ್ಥಿಗಳಿಗೆ ನೀಡಲಾಗಿದೆ. ಸಂದರ್ಶನ, ವ್ಯಕ್ತಿತ್ವ ಪರೀಕ್ಷೆಗೆ ಹಾಜರಾದ, ಆದರೆ ಅಂತಿಮವಾಗಿ ಆಯ್ಕೆಯಾಗದ ಅಭ್ಯರ್ಥಿಗಳ ಮಾಹಿತಿಯನ್ನು ಮಾತ್ರ ಪ್ರದರ್ಶಿಸಲಾಗುವುದು . ಈ ಅಭ್ಯರ್ಥಿಗಳನ್ನು ಇತರ ಸರಕಾರಿ ಅಥವಾ ಖಾಸಗಿ ನೇಮಕಾತಿ ಮಂಡಳಿಗಳು ನೇಮಕಕ್ಕೆ ಪರಿಗಣಿಸಲು ಇದರಿಂದ ಸಹಾಯವಾಗುತ್ತದೆ ಎಂದು ಯುಪಿಎಸ್ಸಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News