ಕೊರೋನ ಹಿನ್ನೆಲೆ: ಜನರಿಲ್ಲದ ಸ್ಟೇಡಿಯಂನಲ್ಲಿ ನೃತ್ಯ ಮಾಡಿ ಆಟಗಾರರನ್ನು ರಂಜಿಸಿದ ರೋಬೊಟ್ ಗಳು

Update: 2020-07-10 12:33 GMT

ಟೋಕಿಯೋ: ಕೊರೋನವೈರಸ್ ಸಮಸ್ಯೆಯಿಂದಾಗಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿ ಖಾಲಿಯಿದ್ದರೇನಂತೆ?, ಜಪಾನ್ ದೇಶದ ಬೇಸ್ ಬಾಲ್ ತಂಡ ಫುಕುವೊಕ ಪ್ರೇಕ್ಷಕರ ಗ್ಯಾಲರಿಯಲ್ಲಿ ಪ್ರೇಕ್ಷಕರ ಬದಲು ಡ್ಯಾನ್ಸಿಂಗ್ ರೋಬೋಟ್‍ ಗಳನ್ನು ಇರಿಸಿದೆ.

ನಿಪ್ಪೋನ್ ಪ್ರೊಫೆಶನಲ್ ಬೇಸ್ ಬಾಲ್ ಪಂದ್ಯಾವಳಿಯಲ್ಲಿ ರಕುಟೆನ್ ಈಗಲ್ಸ್ ವಿರುದ್ಧದ ಪಂದ್ಯದಲ್ಲಿ ಮಂಗಳವಾರ ಫುಕುವೊಕ ತಂಡವು 20 ಡ್ಯಾನ್ಸಿಂಗ್ ರೋಬೋಟ್‍ಗಳ ಏರ್ಪಾಟು ಮಾಡಿತ್ತು. ಈ ರೋಬೋಟ್‍ ಗಳ ತಂಡ ಹಾಡುಗಳಿಗೆ ಕುಣಿಯುತ್ತಿತ್ತು..

ಸಾಫ್ಟ್ ಬ್ಯಾಂಕ್‍ ನ ಹ್ಯುಮನೋಯ್ಡ್ ರೋಬಾಟ್ `ಪೆಪ್ಪರ್' ಹಾಗೂ  ಇತರ ನಾಲ್ಕು  ಕಾಲುಗಳ ರೋಬಾಟ್‍ ಗಳು  ಕೋರಿಯೋಗ್ರಾಫ್ ಮಾಡಲ್ಪಟ್ಟ  ನೃತ್ಯಕ್ಕೆ ಕುಣಿದಿವೆ. ಹಿಂದೆಲ್ಲಾ ಈ ಪಂದ್ಯಾವಳಿ ನಡೆಯುವಾಗ  ಅಭಿಮಾನಿಗಳು 40,000 ಪ್ರೇಕ್ಷಕರಿಗೆ ಆಸನ ಸಾಮರ್ಥ್ಯ ಹೊಂದಿರುವ ಫುಕುವೊಕ ಡೋಮ್‍ ನಲ್ಲಿ ನೃತ್ಯ ಮಾಡುತ್ತಿದ್ದರು.

ಮಂಗಳವಾರ ನರ್ತಿಸಿದ ರೋಬೋಟ್‍ ಗಳಲ್ಲಿ ಕೆಲವು ಹಾಕ್ಸ್ ತಂಡದ ಕ್ಯಾಪ್ ಧರಿಸಿದ್ದರೆ ಇನ್ನು ಕೆಲವು  ಧ್ವಜಗಳನ್ನು ಹಿಡಿದಿದ್ದವು. ಈ ರೋಬೋಟ್‍ ಗಳ ನೃತ್ಯಕ್ಕೆ ಟ್ವಿಟ್ಟರಿನಲ್ಲಿ ಕೆಲವರು ಸ್ವಾರಸ್ಯಕರ ಟ್ವೀಟ್ ಮಾಡಿದ್ದಾರೆ.

“ಮೊದಲು ನಮ್ಮ ಕೆಲಸ ಸೆಳೆದರು, ಈಗ ನಮ್ಮ ಸೀಟುಗಳನ್ನು” ಎಂದು ಒಬ್ಬರು ಬರೆದಿದ್ದರೆ ಇನ್ನೊಬ್ಬರು `ದಿ ಟರ್ಮಿನೇಟರ್' ಎಂದು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News