ಭಾರತದಲ್ಲಿ 24 ಗಂಟೆಯಲ್ಲಿ 28,000ಕ್ಕೂ ಅಧಿಕ ಕೊರೋನ ವೈರಸ್ ಪ್ರಕರಣ ದೃಢ

Update: 2020-07-12 07:05 GMT

ಹೊಸದಿಲ್ಲಿ, ಜು.12: ಭಾರತದಲ್ಲಿ ಕೊರೋನ ವೈರಸ್ ಸೋಂಕಿನ ಹೊಸ ಪ್ರಕರಣಗಳು ರವಿವಾರ ದಾಖಲೆ ಎತ್ತರಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

 ಶನಿವಾರ ಬೆಳಗ್ಗೆ 8 ಗಂಟೆಯಿಂದ ಕಳೆದ 24 ಗಂಟೆಗಳ ಅವಧಿಯಲ್ಲಿ 28,637 ಹೊಸ ಪ್ರಕರಣಗಳನ್ನು ಗುರುತಿಸಲಾಗಿದೆ. ಈಗ ಒಟ್ಟು 8,49,553 ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಇದೀಗ ಸತತ ಮೂರನೇ ದಿನ 26,000ಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ವರದಿಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 551 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 22,674ಕ್ಕೆ ಏರಿಕೆಯಾಗಿದೆ.

ಒಂದೆಡೆ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಗುಣಮುಖರಾದವರ ಸಂಖ್ಯೆ 5,34,621ಕ್ಕೆ ತಲುಪಿದೆ ಎಂದು ಸರಕಾರ ತಿಳಿಸಿದೆ.

ದೇಶದಲ್ಲಿ ಒಂದೇ ದಿನ ಗರಿಷ್ಟ ಪ್ರಕರಣಗಳು ವರದಿಯಾಗಲು ಐದು ರಾಜ್ಯಗಳಾದ-ಮಹಾರಾಷ್ಟ್ರ, ತಮಿಳುನಾಡು, ದಿಲ್ಲಿ, ಕರ್ನಾಟಕ ಹಾಗೂ ಆಂಧ್ರಪ್ರದೇಶಗಳು ದೊಡ್ಡ ಮಟ್ಟದ ಕಾಣಿಕೆ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News