ನೆಲ್ಸನ್ ಮಂಡೇಲರ ಕಿರಿಯ ಪುತ್ರಿ ನಿಧನ

Update: 2020-07-13 15:31 GMT

ಜೊಹಾನ್ಸ್ಬರ್ಗ್ (ದಕ್ಷಿಣ ಆಫ್ರಿಕ), ಜು. 13: ವರ್ಣಭೇದ ನೀತಿ ವಿರುದ್ಧದ ಹೋರಾಟಗಾರ ಹಾಗೂ ದಕ್ಷಿಣ ಆಫ್ರಿಕದ ಮೊದಲ ಕರಿಯ ಅಧ್ಯಕ್ಷ ನೆಲ್ಸನ್ ಮಂಡೇಲರ ಕಿರಿಯ ಮಗಳು ಝಿಂಜಿ ಮಂಡೇಲ ನಿಧನರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.

ಅವರು ಸಾಯುವ ಸಂದರ್ಭದಲ್ಲಿ ಡೆನ್ಮಾರ್ಕ್ ಗೆ ದಕ್ಷಿಣ ಆಫ್ರಿಕದ ರಾಯಭಾರಿಯಾಗಿದ್ದರು.

‘‘ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲ ಮತ್ತು ಹೋರಾಟಗಾರ್ತಿ ವಿನ್ನೀ ಮಡಿಕಿಝೆಲ-ಮಂಡೇಲರ 59 ವರ್ಷದ ಪುತ್ರಿ ಸೋಮವಾರ ಮುಂಜಾನೆ ಜೊಹಾನ್ಸ್ ಬರ್ಗ್ ಆಸ್ಪತ್ರೆಯೊಂದರಲ್ಲಿ ನಿಧನರಾದರು’’ ಎಂದು ದಕ್ಷಿಣ ಆಫ್ರಿಕದ ಸರಕಾರಿ ಸುದ್ದಿವಾಹಿನಿ ಎಸ್ಎಬಿಸಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News