ಇಟಲಿಯನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಿದ ಮೆಕ್ಸಿಕೊ

Update: 2020-07-13 15:36 GMT

ಮೆಕ್ಸಿಕೊ ಸಿಟಿ, ಜು. 13: ಮೆಕ್ಸಿಕೊದಲ್ಲಿ ನೂತನ-ಕೊರೋನ ವೈರಸ್ ನಿದಾಗಿ ಸಂಭವಿಸಿದ ಒಟ್ಟು ಸಾವುಗಳ ಸಂಖ್ಯೆ ರವಿವಾರ 35,000ವನ್ನು ದಾಟಿದೆ. ಈಗ ಲ್ಯಾಟಿನ್ ಅಮೆರಿಕ ದೇಶವು ಕೊರೋನ ವೈರಸ್ ಸಂಬಂಧಿ ಸಾವಿನ ಸಂಖ್ಯೆಯಲ್ಲಿ ಇಟಲಿಯನ್ನು ಹಿಂದಿಕ್ಕಿ ಜಗತ್ತಿನಲ್ಲೇ ನಾಲ್ಕನೇ ಸ್ಥಾನದಲ್ಲಿದೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಅದಕ್ಕಿಂತ ಮೊದಲಿನ ಸ್ಥಾನದಲ್ಲಿ ಅಮೆರಿಕ, ಬ್ರೆಝಿಲ್ ಮತ್ತು ಬ್ರಿಟನ್ ದೇಶಗಳಿವೆ.

ಆದರೆ, ದೇಶದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕವು ತನ್ನ ತೀವ್ರತೆಯನ್ನು ಕಳೆದುಕೊಳ್ಳುತ್ತಿದೆ ಎಂದು ದೇಶದ ಎಡಪಂಥೀಯ ಅಧ್ಯಕ್ಷ ಆಂಡ್ರಿಸ್ ಮ್ಯಾನುಯೆಲ್ ಲೊಪೇಝ್ ಓಬ್ರಡರ್ ರವಿವಾರ ಹೇಳಿದ್ದಾರೆ. ಬಲಪಂಥೀಯ ಮಾಧ್ಯಮಗಳು ಅನವಶ್ಯಕವಾಗಿ ಜನರನ್ನು ಗಾಬರಿಗೊಳಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಮೆಕ್ಸಿಕೊದಲ್ಲಿ ರವಿವಾರ ಹೊಸದಾಗಿ 276 ಸಾವುಗಳು ಸಂಭವಿಸಿವೆ ಹಾಗೂ 4,482 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದ ಒಟ್ಟು ಸಾವಿನ ಸಂಖ್ಯೆ 35,006ಕ್ಕೆ ಏರಿದರೆ, ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 2,99,750ನ್ನು ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News