ಬಂಗ್ಲೆ ಖಾಲಿ ಮಾಡಲು ಮತ್ತಷ್ಟು ಸಮಯ ಕೇಳಿದ್ದೇನೆ ಎನ್ನುವುದು ಸುಳ್ಳು ಸುದ್ದಿ: ಪ್ರಿಯಾಂಕಾ ಗಾಂಧಿ

Update: 2020-07-14 08:39 GMT

ಹೊಸದಿಲ್ಲಿ, ಜು.14: ನಾನು ಆಗಸ್ಟ್ 1ರಂದು ತಾನಿರುವ ಸರಕಾರಿ ಬಂಗ್ಲೆಯನ್ನು ತೆರೆವುಗೊಳಿಸುವೆ. ನಾನು ಬಂಗ್ಲೆ ತೆರವಿಗೆ ಇನ್ನಷ್ಟು ಸಮಯ ಕೇಳಿದ್ದೇನೆ ಎನ್ನುವುದು ಸುಳ್ಳು ಸುದ್ದಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸ್ಪಷ್ಟಪಡಿಸಿದ್ದಾರೆ.

ಜುಲೈ 1ರಂದು ಪ್ರಿಯಾಂಕಾರಿಗೆ ನೋಟಿಸ್ ನೀಡಿದ್ದ ಸರಕಾರವು ಲೋಧಿ ಎಸ್ಟೇಟ್‌ನಲ್ಲಿರುವ ಬಂಗ್ಲೆಯನ್ನು ತೆರವುಗೊಳೀಸಲು ಸೂಚಿಸಿತ್ತು. ಪ್ರಿಯಾಂಕಾರಿಗೆ 1997ರಲ್ಲಿ ಈ ಬಂಗ್ಲೆ ಮಂಜೂರಾಗಿತ್ತು.ಕಳೆದ ವರ್ಷ ವಿಶೇಷ ಭದ್ರತಾ ಪಡೆ(ಎಸ್‌ಪಿಜಿ)ಭದ್ರತೆಯನ್ನು ಹಿಂಪಡೆದಿರುವ ಕಾರಣ ನೀವು ಬಂಗ್ಲೆಯಲ್ಲಿರಲು ಅನರ್ಹರಾಗಿದ್ದಾರೆ ಎಂದು ಹೇಳಲಾಗಿತ್ತು. ಆಗಸ್ಟ್ 1ಕ್ಕೆ ಬಂಗ್ಲೆ ಖಾಲಿ ಮಾಡುವಂತೆ ಸೂಚಿಸಲಾಗಿತ್ತು.

ಬಂಗ್ಲೆಯ ಅವಧಿಯನ್ನು ವಿಸ್ತರಿಸುಂತೆ ಪ್ರಿಯಾಂಕಾ ಕೇಳಿಕೊಂಡಿದ್ದಾರೆ ಎಂಬ ವರದಿಯನ್ನು ನಿರಾಕರಿಸಿದ ಪ್ರಿಯಾಂಕಾ ಗಾಂಧಿ,"ಇದೊಂದು ನಕಲಿ ಸುದ್ದಿ. ನಾನು ಅಂತಹ ಯಾವುದೆ ವಿನಂತಿಯನ್ನು ಸರಕಾರಕ್ಕೆ ಮಾಡಿಲ್ಲ.ನನಗೆ ಜುಲೈ 1ರಂದು ಬಂಗ್ಲೆ ತೆರವಿಗೆ ನೋಟಿಸ್ ನೀಡಿದ್ದು, ಆಗಸ್ಟ್ 1ರಂದು ಲೋಧೀ ಎಸ್ಟೇಟ್‌ನಲ್ಲಿರುವ ಬಂಗ್ಲೆಯನ್ನು ತೆರವುಗೊಳಿಸುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News