ಸಿಂಗಾಪುರ: ಒಂದೇ ದಿನ 249 ಮಂದಿಗೆ ಸೋಂಕು

Update: 2020-07-15 17:04 GMT

ಸಿಂಗಾಪುರ,ಜು.15: ಸಿಂಗಾಪುರದಲ್ಲಿ ಬುಧವಾರ ಕೊರೋನ ವೈರಸ್ ಸೋಂಕಿನ 249 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ46,878ಕ್ಕೇರಿದೆ.

ಇಂದು ವರದಿಯಾದ 249 ಪ್ರಕರಣಗಳಲ್ಲಿ 233 ಪ್ರಕರಣಗಳು ದೇಶದ ವಸತಿನಿಲಯಗಳಲ್ಲಿ ವಾಸಿಸುತ್ತಿರುವ ವಿದೇಶಿ ಕಾರ್ಮಿಕರದ್ದಾಗಿವೆ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ತಿಳಿಸಿದೆ.

 ಇಂದು 249 ಹೊಸ ಸೋಂಕು ಪ್ರಕರಣ ಪತ್ತೆಯೊಂದಿಗೆ ಸಿಂಗಾಪುರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 46,878ಕ್ಕೇರಿದೆ. ಕೊರೋನ ವೈರಸ್ ಗೆ ಸಂಬಂಧಿಸಿದ ಆರೋಗ್ಯ ತೊಂದರೆಗಳು ಕಾಣಿಸಿಕೊಂಡಿದ್ದರಿಂದ 62 ವರ್ಷ ವೃದ್ಧರೊಬ್ಬರು ಮಂಗಳವಾರ ನಿಧನರಾಗಿದ್ದು, ಇದರಿಂದ ಆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 27ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News