ಬ್ರೆಝಿಲ್ ಅಧ್ಯಕ್ಷ ಬೊಲ್ಸೊನಾರೊಗೆ ಮತ್ತೆ ಕೊರೋನ ಸೋಂಕು

Update: 2020-07-16 14:31 GMT

ಬ್ರೆಸೀಲಿಯ (ಬ್ರೆಝಿಲ್), ಜು. 16: ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಮತ್ತೊಮ್ಮೆ ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಸಿಎನ್ಎನ್ ಬ್ರೆಝಿಲ್ ಬುಧವಾರ ವರದಿ ಮಾಡಿದೆ. ಅವರು ಮಂಗಳವಾರ ಹೊಸದಾಗಿ ಪರೀಕ್ಷೆಗೆ ಒಳಗಾದಾಗ ಅವರಲ್ಲಿ ಸೋಂಕಿರುವುದು ಪತ್ತೆಯಾಗಿತ್ತು.

ಬ್ರೆಸೀಲಿಯದಲ್ಲಿರುವ ಅಧಿಕೃತ ನಿವಾಸದಲ್ಲಿ ನಾನು ಪ್ರತ್ಯೇಕವಾಗಿರುವುದಾಗಿ 65 ವರ್ಷದ ಕಡುಬಲಪಂಥೀಯ ನಾಯಕ ಹೇಳಿದರು. ಇಲ್ಲಿಂದಲೇ ವೀಡಿಯೊ ಕಾನ್ಫರೆನ್ಸ್ ಮೂಲಕ ನಾನು ಕೆಲಸ ಮಾಡುವುದಾಗಿ ಅವರು ತಿಳಿಸಿದರು.

ಲಾಕ್ಡೌನ್ ನಿಯಮಗಳನ್ನು ಉಲ್ಲಂಸುವ ಮೂಲಕ ವಿವಾದಗಳನ್ನು ಸೃಷ್ಟಿಸುತ್ತಿದ್ದ ಅವರು ಒಂದು ವಾರದ ಹಿಂದೆ ಮೊದಲ ಬಾರಿಗೆ ಸೋಂಕಿಗೆ ಒಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News