ನಟ ರಣಬೀರ್ ಕಪೂರ್ ರನ್ನು ಹೋಲುತ್ತಿದ್ದ ಮಾಡೆಲ್ ಜುನೈದ್ ಶಾ ನಿಧನ

Update: 2020-07-17 16:14 GMT

ಹೊಸದಿಲ್ಲಿ: ಬಾಲಿವುಡ್ ನಟ ರಣಬೀರ್ ಕಪೂರ್ ರನ್ನು ಹೋಲುವ, ಅದೇ ಕಾರಣಕ್ಕಾಗಿ ಪ್ರಸಿದ್ಧಿ ಗಳಿಸಿದ್ದ ಮಾಡೆಲ್ ಜುನೈದ್ ಶಾ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 28 ವರ್ಷ ವಯಸ್ಸಾಗಿತ್ತು.

ಈ ಬಗ್ಗೆ ಕಾಶ್ಮೀರದ ಪತ್ರಕರ್ತ ಯೂಸುಫ್ ಜಮೀಲ್ ಟ್ವೀಟ್ ಮಾಡಿ, “ನಮ್ಮ ಹಳೆಯ ನೆರೆಮನೆಯ ಸ್ನೇಹಿತ ಅಹ್ಮದ್ ಶಾ ಅವರ ಪುತ್ರ ಜುನೈದ್ ಮೃತಪಟ್ಟಿದ್ದಾರೆ. ಆತ ಬಾಲಿವುಡ್ ನಟ ರಣಬೀರ್ ಕಪೂರ್ ರನ್ನು ಹೋಲುತ್ತಿದ್ದ ಎಂದು ಜನರು ಹೇಳುತ್ತಿದ್ದರು” ಎಂದಿದ್ದಾರೆ.

ರಣಬೀರ್ ಕಪೂರ್ ರನ್ನು ಹೋಲುತ್ತಿದ್ದಾರೆ ಎಂದು ಜನರು ಗುರುತಿಸಿದ ನಂತರ ಜುನೈದ್ ಶಾ ಅವರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ರಣಬೀರ್ ಕಪೂರ್ ಅವರ ತಂದೆ, ರಿಶಿ ಕಪೂರ್ 2015ರಲ್ಲಿ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News