ರಾಜಸ್ಥಾನ ಬಿಕ್ಕಟ್ಟಿನ ಕುರಿತು ಕೊನೆಗೂ ಮೌನ ಮುರಿದ ವಸುಂಧರಾ ರಾಜೇ ಹೇಳಿದ್ದು ಹೀಗೆ…

Update: 2020-07-18 12:47 GMT

ಜೈಪುರ್ : ರಾಜಸ್ಥಾನದ ಮಾಜಿ ಸಿಎಂ ಹಾಗೂ ಹಿರಿಯ ಬಿಜೆಪಿ ನಾಯಕಿ ವಸುಂಧರಾ ರಾಜೇ ಸಿಂಧಿಯಾ ಅವರು ರಾಜ್ಯದ ರಾಜಕೀಯ ಬಿಕ್ಕಟ್ಟಿನ ಕುರಿತಂತೆ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳಿಗೆ  ರಾಜ್ಯದ ಜನರು ಬೆಲೆ ತೆರುವಂತಾಗಿದ್ದು ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.

ಕೋವಿಡ್-19 ನಡುವೆ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಟ್ವೀಟ್ ಮಾಡಿದ ವಸುಂಧರಾ ರಾಜೇ, “ಕೋವಿಡ್-19 ರಾಜ್ಯದಲ್ಲಿ 500ಕ್ಕೂ ಅಧಿಕ ಜೀವಗಳನ್ನು ಬಲಿ ಪಡೆದಿರುವಂತಹ ಸಂದರ್ಭದಲ್ಲಿ ಹಾಗೂ ಪಾಸಿಟಿವ್ ಪ್ರಕರಣಗಳು 28,000ದ ಗಡಿ ತಲುಪುತ್ತಿರುವಂತಹ ಸಮಯದಲ್ಲಿ; ಮಿಡತೆಗಳು ರೈತರ ಕೃಷಿ ಭೂಮಿಗಳಿಗೆ ದಾಳಿ ಮಾಡುತ್ತಿರುವಂತಹ ಸಂದರ್ಭದಲ್ಲಿ, ಮಹಿಳೆಯರ ವಿರುದ್ಧದ ಅಪರಾಧಗಳು  ಅತ್ಯಧಿಕವಾಗಿರುವಂತಹ ಸಂದರ್ಭದಲ್ಲಿ, ರಾಜ್ಯದಲ್ಲಿ ವಿದ್ಯುಚ್ಛಕ್ತಿ ಸಮಸ್ಯೆಯಿರುವಂತಹ ಸಂದರ್ಭದಲ್ಲಿ, ಹೀಗೆ  ನಮ್ಮ ಜನರು ಎದುರಿಸುತ್ತಿರುವ ಕೆಲವು ಸಮಸ್ಯೆಗಳನ್ನು ಹೇಳಿದ್ದೇನೆ. ಬಿಜೆಪಿ ಹಾಗೂ ಬಿಜೆಪಿ ನಾಯಕರುಗಳ  ಹೆಸರುಗಳನ್ನು ಎಳೆದು ತರುವಲ್ಲಿ ಅರ್ಥವಿಲ್ಲ'' ಎಂದಿದ್ದಾರೆ.

ಪಕ್ಷದಲ್ಲಿ ಹಲವು ಸಮಯದಿಂದ ಅಷ್ಟೊಂದು ಸಕ್ರಿಯರಾಗಿರದೇ ಇರುವ ವಸುಂಧರಾ ಜೂನ್ 27ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಾಜಸ್ಥಾನದಲ್ಲಿ ನಡೆಸಿದ್ದ ವರ್ಚುವಲ್ ಜನ ಸಂವಾದ ರ್ಯಾಲಿ ಸಂದರ್ಭ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News