ಭಾರೀ ಮಳೆಗೆ ಉಕ್ಕಿ ಹರಿದ ಚರಂಡಿ ನೀರಿನೊಂದಿಗೆ ಕೊಚ್ಚಿ ಹೋದ ಮನೆ

Update: 2020-07-19 10:59 GMT

ಹೊಸದಿಲ್ಲಿ: ದಿಲ್ಲಿಯ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಚರಂಡಿಯೊಂದು ಉಕ್ಕಿ ಹರಿದ ಪರಿಣಾಮ ಮನೆಯೊಂದು ಕೊಚ್ಚಿ ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರ ಬೇಸ್ ಮೆಂಟ್ ಗೆ ಚರಂಡಿಯ ನೀರು ಉಕ್ಕಿ ಹರಿಯುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ನೀರಿನ ರಭಸಕ್ಕೆ ಮನೆಯ ಕುಸಿದು ಬೀಳುತ್ತಿರುವುದು ಮತ್ತು ಸ್ಥಳೀಯರು ಕಿರುಚುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಘಟನೆ ನಡೆಯುವಾಗ ಸ್ಥಳದಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News