×
Ad

ಕೋವಿಡ್ 19 ಆಸ್ಪತ್ರೆಯ ಛಾವಣಿಯಿಂದ ರೋಗಿಗಳಿದ್ದ ವಾರ್ಡ್ ನೊಳಕ್ಕೆ ಸುರಿದ ಮಳೆ ನೀರು!

Update: 2020-07-19 17:43 IST

ಲಕ್ನೋ: ಮಳೆ ನೀರು ಛಾವಣಿಯಿಂದ ಸುರಿದ ಪರಿಣಾಮ ಕೋವಿಡ್ 19 ರೋಗಿಗಳಿಗಾಗಿ ಮೀಸಲಾಗಿದ್ದ ಆಸ್ಪತ್ರೆಯೊಂದರಲ್ಲಿ ನೀರು ತುಂಬಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.

ವಾರ್ಡ್ ನೊಳಗಿದ್ದ ರೋಗಿಯೊಬ್ಬರು ಈ ದೃಶ್ಯಾವಳಿಯನ್ನು ಚಿತ್ರೀಕರಿಸಿದ್ದಾರೆ. ಸೀಲಿಂಗ್ ನಲ್ಲಿರುವ ದೊಡ್ಡ ರಂಧ್ರದಿಂದ ನೀರು ಧಾರಾಕಾರವಾಗಿ ಸುರಿಯುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಇದು ಪ್ಲಂಬಿಂಗ್ ಸಮಸ್ಯೆಯಿಂದಾದ ಎಡವಟ್ಟು ಎಂದು ವಿಡಿಯೋ ವೈರಲ್ ಆದ ಬಳಿಕ ಬರೇಲಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈಗ ಪೈಪ್ ಲೈನ್ ಸರಿಪಡಿಸಲಾಗಿದೆ ಮತ್ತು ರೋಗಿಗಳನ್ನು ಬೇರೆ ವಾರ್ಡ್ ಗಳಿಗೆ ಸ್ಥಳಾಂತರಿಸಲಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News