ದಲಿತ ಬಾಲಕನಿಗೆ ಮಲ ತಿನ್ನಿಸಿದ ಮೇಲ್ಜಾತಿಯ ಭೂಮಾಲಕ: ಕುಟುಂಬದ ಆರೋಪ

Update: 2020-07-19 15:34 GMT

ಚೆನ್ನೈ, ಜು. 19: ಲಾಕ್ ಡೌನ್ ಸಂದರ್ಭ ತಮಿಳುನಾಡಿನಲ್ಲಿ ಇನ್ನೊಂದು ಜಾತಿ ದೌರ್ಜನ್ಯದ ಪ್ರಕರಣ ವರದಿಯಾಗಿದೆ. ತನ್ನ ಪಟ್ಟಾ ಭೂಮಿಯಲ್ಲಿ ಮಲವಿಸರ್ಜನೆ ಮಾಡಿದ ಆರೋಪದಲ್ಲಿ 14 ವರ್ಷದ ಬಾಲಕನಿಗೆ ಮಲ ತಿನ್ನುವಂತೆ ಹಾಗೂ ಮಲವನ್ನು ಮನೆಗೆ ಒಯ್ಯುವಂತೆ ಮೇಲ್ಜಾತಿಯ ವ್ಯಕ್ತಿಯೋರ್ವ ಒತ್ತಾಯಿಸಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಘಟನೆ ಧರ್ಮಪುರಿ ಜಿಲ್ಲೆಯ ಪೆನ್ನಗಾರಂನಲ್ಲಿ ನಡೆದಿದೆ. 
ಭೂಮಾಲಕ ರಾಜಶೇಖರ 10ನೇ ತರಗತಿ ಬಾಲಕನಿಗೆ ಜಾತಿ ನಿಂದನೆ ಮಾಡಿದ್ದಾನೆ ಹಾಗೂ ಮಲವನ್ನು ಮನೆಗೆ ಕೊಂಡೊಯ್ಯುವಂತೆ ಒತ್ತಾಯಿಸಿ ಬೆತ್ತದಲ್ಲಿ ಥಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

 ರಾಜಶೇಖರ ಅಯ್ಯರ್ ಜಾತಿಗೆ ಸೇರಿದವನು. ಬಾಲಕ ತಮಿಳುನಾಡಿನ ಪರಿಶಿಷ್ಟ ಜಾತಿ ಆದಿ ದ್ರಾವಿಡಕ್ಕೆ ಸೇರಿದವನು. ರಾಜಶೇಖರನಿಂದ ನಡೆದ ದೌರ್ಜನ್ಯದ ಕುರಿತು ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ರಾಜಶೇಖರ್ ಗೆ ಸೇರಿದ ಭೂಮಿಯಲ್ಲಿ ಬಾಲಕ ಜುಲೈ 15ರಂದು ಮಲವಿಸರ್ಜನೆ ಮಾಡಿದ್ದ. ಬಾಲಕ ತನ್ನ ಭೂಮಿಯಲ್ಲಿ ಮಲವಿಸರ್ಜನೆ ಮಾಡುವುದನ್ನು ಗಮನಿಸಿದ ರಾಜಶೇಖರ ಮಲ ತಿನ್ನವಂತೆ ಹಾಗೂ ಮಲವನ್ನು ಕೈಯಲ್ಲಿ ಮನೆಗೆ ಕೊಂಡೊಯ್ಯುವಂತೆ ಒತ್ತಾಯಿಸಿ ಬಾಲಕನಿಗೆ ಥಳಿಸಿದ್ದ ಎಂದು ಎಫ್ಐಆರ್ ಹೇಳಿದೆ. ರಾಜಶೇಖರನ ಹಲ್ಲೆಗೆ ಹೆದರಿ ಬಾಲಕ ಮಲವನ್ನು ಸಂಗ್ರಹಿಸಿ ಮನೆಯತ್ತ ಐದು ಮೀಟರ್ ನಡೆದಿದ್ದಾನೆ ಎಂದು ಎಫ್ಐಆರ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News