×
Ad

‘ಕುದುರೆ ವ್ಯಾಪಾರ’ದ ಏಜೆಂಟ್ ಜೊತೆ ವಸುಂಧರಾ ರಾಜೆಗೆ ನಂಟು: ಕಾಂಗ್ರೆಸ್ ಶಾಸಕನ ಆರೋಪ

Update: 2020-07-19 21:46 IST

ಜೈಪುರ, ಜು. 19: ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಅವರ ಸರಕಾರ ಉರುಳಿಸಲು ನಡೆಯುತ್ತಿರುವ ಕುದುರೆ ವ್ಯಾಪಾರ (ಶಾಸಕರ ಖರೀದಿ) ಹಾಗೂ ಬಿಜೆಪಿಯ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ನಡುವೆ ನಂಟು ಇದೆ ಎಂದು ಕಾಂಗ್ರೆಸ್ ಶಾಸಕ ರಾಜೇಂದ್ರ ಗುಡಾ ಆರೋಪಿಸಿದ್ದಾರೆ. 

“ಈ ಪ್ರಕರಣದಲ್ಲಿ ಬಂಧಿತನಾಗಿರುವ ವ್ಯಕ್ತಿಯೋರ್ವ 8 ತಿಂಗಳ ಹಿಂದೆ ನನ್ನನ್ನು ಸಂಪರ್ಕಿಸಿದ್ದ” ಎಂದು ಗುಡಾ ಹೇಳಿದ್ದಾರೆ. ‘‘ವಸುಂಧರಾ ಜಿ ಹಾಗೂ ಇತರರನ್ನು ಭೇಟಿಯಾಗುವಂತೆ ಸಂಜಯ್ ಜೈನ್ ನನ್ನಲ್ಲಿ ವಿನಂತಿಸಿದ್ದ. ಅವರಂತೆ ಇತರ ಏಜೆಂಟರರೂ ಇದ್ದಾರೆ. ಆದರೆ, ಅವರು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿಲ್ಲ. ಸಂಜಯ್ ಜೈನ್ ದೀರ್ಘಕಾಲ ಸಕ್ರಿಯರಾಗಿದ್ದರು’’ ಎಂದು ಅವರು ಹೇಳಿದ್ದಾರೆ. ಪ್ರಕರಣದ ತನಿಖೆಗೆ ಸಂಬಂಧಿಸಿ ಸಂಜಯ್ ಜೈನ್ ಅವರನ್ನು ಸ್ಪೆಷಲ್ ಆಪರೇಶನ್ ಗ್ರೂಪ್ ಬಂಧಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News