×
Ad

ಗೋಧ್ರಾದ ಮಸೀದಿ ಕಟ್ಟಡದಲ್ಲಿ ಈಗ ಕೋವಿಡ್-19 ಆರೈಕೆ ಕೇಂದ್ರ

Update: 2020-07-20 14:59 IST

ವಡೋದರ : ಗುಜರಾತ್‍ನ ಗೋಧ್ರಾದ ಎರಡನೇ ಅತಿ ದೊಡ್ಡ ಮಸೀದಿಯಲ್ಲಿ ಇತ್ತೀಚಿಗಿನವರೆಗೂ ಕೋವಿಡ್-19 ರೋಗಿಗಳು ಗುಣಮುಖರಾಗಲು ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿದ್ದರೆ ಇದೀಗ ಈ ಮಸೀದಿ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದು ಕಟ್ಟಡದ ಒಂದು ಭಾಗ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆಗೊಂಡಿದೆ.

ಕಳೆದ ವಾರ ಮಸೀದಿಯಲ್ಲಿ ಆರಂಭಗೊಂಡ ಕೋವಿಡ್ ಕೇರ್ ಕೇಂದ್ರದಲ್ಲಿ ಎಲ್ಲಾ ಜಾತಿ ಧರ್ಮೀಯರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅಲ್ಲಿ ಬೇರೆ ಬೇರೆ ಸಮುದಾಯಗಳಿಗೆ ಸೇರಿದ ಒಂಬತ್ತು ಕೋವಿಡ್ ಪಾಸಿಟಿವ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಿಳಾ ಹಜ್ ಯಾತ್ರಾರ್ಥಿಗಳಿಗೆಂದು ವಿನ್ಯಾಸಗೊಳಿಸಲಾಗಿದ್ದ ಗೋಧ್ರಾದ ಶೇಖ್ ಮಜಾವರ್ ರಸ್ತೆಯಲ್ಲಿರುವ ಆದಾಮ್ ಮಸೀದಿಯ ನೆಲ ಅಂತಸ್ತು ಈಗ ಕೋವಿಡ್ ಕೇರ್ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಈ ಪ್ರದೇಶದಲ್ಲಿ ಏರಿಕೆಯಾಗುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿರಿಸಿ ಮಸೀದಿಯ ಆಡಳಿತ ಟ್ರಸ್ಟ್ ಈ ಕ್ರಮ ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News