12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯದಲ್ಲಿ ಬದಲಾವಣೆ ತಂದ ಎನ್‍ಸಿಇಆರ್ ಟಿ

Update: 2020-07-21 12:31 GMT

ಹೊಸದಿಲ್ಲಿ : ಹನ್ನೆರಡನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿರುವ ಎನ್‍ಸಿಇಆರ್‍ಟಿ, ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಯ ವಿಚಾರವನ್ನು ಸೇರಿಸಿ ‘ಸೆಪರೇಟಿಸಂ ಎಂಡ್ ಬಿಯಾಂಡ್' ಎಂಬ ಪಾಠದ ಬದಲು ‘2002 ಎಂಡ್ ಬಿಯಾಂಡ್' ಎಂಬ ವಿಷಯದ ಪಾಠ ಹೊಂದಿದೆ. ಈ ಬದಲಾವಣೆಗಳು `ಪೊಲಿಟಿಕ್ಸ್ ಇನ್ ಇಂಡಿಯಾ ಸಿನ್ಸ್ ಇಂಡಿಪೆಂಡೆನ್ಸ್' ಪಠ್ಯದ `ರೀಜನಲ್ ಅಸ್ಪಿರೇಶನ್ಸ್' ಅಧ್ಯಾಯದಲ್ಲಿದೆ.

‘2002 ಎಂಡ್ ಬಿಯಾಂಡ್' ಅಧ್ಯಾಯದಲ್ಲಿ ಹೀಗೆ ಬರೆಯಲಾಗಿದೆ- “ಮೆಹಬೂಬಾ ಮುಫ್ತಿ ಅವರ ಆಡಳಿತದಲ್ಲಿ ಗಂಭೀರ ಉಗ್ರವಾದ ಪ್ರಕರಣಗಳು ಹಾಗೂ ಹೆಚ್ಚಿದ ಆಂತರಿಕ ಹಾಗೂ ಬಾಹ್ಯ ಉದ್ವಿಗ್ನತೆ ಪ್ರಕರಣಗಳು ನಡೆದಿವೆ. ಜೂನ್ 2018ರಲ್ಲಿ ಮುಫ್ತಿ ಸರಕಾರಕ್ಕೆ ಬಿಜೆಪಿ ಬೆಂಬಲ ವಾಪಸ್ ಪಡೆದ ನಂತರ ರಾಷ್ಟ್ರಪತಿಗಳ ಆಡಳಿತ ಹೇರಲಾಯಿತು. ಆಗಸ್ಟ್ 5, 2019ರಂದು 370ನೇ ವಿಧಿಯನ್ನು ರದ್ದುಗೊಳಿಸಿ ರಾಜ್ಯವನ್ನು ಜಮ್ಮು ಕಾಶ್ಮೀರ ಮತ್ತು ಲಡಾಖ್ ಎಂಬ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಪರಿವರ್ತಿಸಲಾಯಿತು.''

ಈ ಹಿಂದಿನ ಪಠ್ಯದಲ್ಲಿ ಅಲ್ಲಿನ ಇತಿಹಾಸದ ಚಿತ್ರಣವಿದ್ದರೂ ಅಲ್ಲಿನ ಹಿಂಸೆಗೆ 370ನೇ ವಿಧಿಯನ್ನು ದೂಷಿಸಲಾಗಿರಲಿಲ್ಲ. ಆದರೆ ಈಗ ಮಾಡಲಾಗಿರುವ ಮಾರ್ಪಾಟಿನಲ್ಲಿ  ``ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ಹೊಂದಿದ್ದ ಹೊರತಾಗಿಯೂ ಗಡಿಯಾಚೆಗಿನ ಉಗ್ರವಾದ ಹಾಗೂ ರಾಜಕೀಯ ಅಸ್ಥಿರತೆ ಹಲವು ಜೀವಗಳನ್ನು ಬಲಿ ಪಡೆದಿತ್ತು ಹಾಗೂ ಕಾಶ್ಮೀರಿ ಪಂಡಿತರ ವಲಸೆಗೂ ಕಾರಣವಾಗಿತ್ತು,'' ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News