ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಯುವ ವೈದ್ಯ ಆತ್ಮಹತ್ಯೆ

Update: 2020-07-21 12:33 GMT
ಸಾಂದರ್ಭಿಕ ಚಿತ್ರ

ಚೆನ್ನೈ: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ನಗರದ ಸರಕಾರಿ ಸ್ಟೇನ್ಲಿ ಮೆಡಿಕಲ್ ಕಾಲೇಜ್ ಎಂಡ್ ಹಾಸ್ಪಿಟಲ್ ಇಲ್ಲಿನ 24 ವರ್ಷದ ವೈದ್ಯರೊಬ್ಬರು  ಆಸ್ಪತ್ರೆಯ ಪುರುಷರ ಹಾಸ್ಟೆಲ್ ಕಟ್ಟಡದ ಮೂರನೇ ಅಂತಸ್ತಿನಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಿರುಪುರ್ ಜಿಲ್ಲೆಯ ಉದುಮಲೈಪೇಟೆ ಮೂಲದವರಾದ ಡಾ. ಕಣ್ಣನ್ ಅವರು ಯಾವುದೇ ಡೆತ್ ನೋಟ್ ಬರೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.  ಅವರು ಜೂನ್ ತಿಂಗಳಲ್ಲಿ ಆಸ್ಪತ್ರೆಗೆ ಕರ್ತವ್ಯಕ್ಕೆ ಸೇರಿದ್ದರು.

ಕಣ್ಣನ್ ಅವರು ಸೋಮವಾರ ಮುಂಜಾನೆ 1.30ರ ತನಕವೂ ರೋಗಿಗಳ ಆರೈಕೆ ಮಾಡಿ ನಂತರ ಹಾಸ್ಟೆಲ್‍ಗೆ ತೆರಳಿದ್ದರು ಎಂದು ಅವರ ಸಹೋದ್ಯೋಗಿಗಳು ಹೇಳುತ್ತಾರೆ. ಆದರೆ ಬೆಳಗ್ಗೆ 4 ಗಂಟೆ ಸುಮಾರಿಗೆ ಅವರು ಆಸ್ಪತ್ರೆ ಪಕ್ಕದಲ್ಲಿ ಬಿದ್ದಿರುವುದು ಕಂಡು ಬಂದಿತ್ತು.

ಅವರು ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕೆಲವರು ಹೇಳುತ್ತಿದ್ದಾರಾದರೂ ಪೊಲೀಸರು ಈ ವಾದವನ್ನು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News